ಟಿಕೆಟ್‌ ಆಕಾಂಕ್ಷಿಗಳ ಫ್ಲೆಕ್ಸ್‌ ಭರಾಟೆ

7
ಪರಿವರ್ತನಾ ಯಾತ್ರೆಗೆ ಭರದ ಸಿದ್ಧತೆ

ಟಿಕೆಟ್‌ ಆಕಾಂಕ್ಷಿಗಳ ಫ್ಲೆಕ್ಸ್‌ ಭರಾಟೆ

Published:
Updated:
ಟಿಕೆಟ್‌ ಆಕಾಂಕ್ಷಿಗಳ ಫ್ಲೆಕ್ಸ್‌ ಭರಾಟೆ

ಸಂಡೂರು: ಇದೇ 6 ರಂದು ಪಟ್ಟಣದಲ್ಲಿ ನಡೆಯುವ ಬಿಜೆಪಿ ಪರಿವರ್ತನಾ ಯಾತ್ರೆಗೆ ಭರದ ಸಿದ್ಧತೆ ನಡೆದಿದೆ.

ಕಾರ್ಯಕ್ರಮ ಆಯೋಜಿಸಿರುವ ಸ್ಥಳ, ಮಾರ್ಗದಲ್ಲಿ ಟಿಕೆಟ್‌ ಅಕಾಂಕ್ಷಿಗಳ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಕ್ಷೇತ್ರದಲ್ಲಿ ಗೆಲುವಿನ ಛಲದೊಂದಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‌ ಕೆಲ ಮುಖಂಡರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನವೂ ಆರಂಭವಾಗಿದೆ. ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಪಕ್ಷದ ಪರಿಶಿಷ್ಟ ಪಂಗಡದ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಕೃಷ್ಣಪ್ಪ ಹಾಗೂ ಅವರ ಪುತ್ರ ಪುರಸಭೆ ಸದಸ್ಯ ಡಿ. ರಾಘವೇಂದ್ರ ಅವರು ಬಿಜೆಪಿ ಸೇರಿದ್ದರು.

ಫ್ಲೆಕ್ಸ್‌ಗಳಲ್ಲಿ ಕಾರ್ತಿಕೇಯ ಘೋರ್ಪಡೆ ಭಾವಚಿತ್ರ: ಘೋರ್ಪಡೆ ರಾಜವಂಶದ ಕಾರ್ತಿಕೇಯ ಘೋರ್ಪಡೆಯವರು ಬಿಜೆಪಿ ಸೇರಲಿದ್ದಾರೆಂಬ ಸುದ್ದಿ ಈ ಭಾಗದಲ್ಲಿ ಕೇಳಿ ಬರುತ್ತಿದೆ. ಸಂಡೂರಿನಲ್ಲಿ ಬಿಜೆಪಿ ಮುಖಂಡರು ಹಾಕಿಸಿರುವ ಫ್ಲೆಕ್ಸ್‌ಗಳಲ್ಲಿ ಕಾರ್ತಿಕೇಯ ಘೋರ್ಪಡೆ ಅವರ ಭಾವಚಿತ್ರ ಇರುವುದು ವದಂತಿಗಳಿಗೆ ಪುಷ್ಠಿ ನೀಡುವಂತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry