ಸಾಗರಗಳ ಸರಾಸರಿ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್

7

ಸಾಗರಗಳ ಸರಾಸರಿ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್

Published:
Updated:
ಸಾಗರಗಳ ಸರಾಸರಿ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್

ಲಾಸ್ ಏಂಜಲೀಸ್: ಜಗತ್ತಿನ ಸಾಗರಗಳ ಸರಾಸರಿ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಿಶ್ವದ ವಿವಿಧ ಸಾಗರಗಳ ಸರಾಸರಿ ತಾಪಮಾನ ಅಳೆಯುವ ಮಹತ್ವದ ವಿಧಾನವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈವರೆಗೆ ಇದು ಅತ್ಯಂತ ಕಷ್ಟದ ಕೆಲಸ ಎಂದು ಪರಿಗಣಿಸಲಾಗಿತ್ತು ಎಂದು ಸಂಶೋಧಕರು ಹೇಳಿದ್ದಾರೆ.

ನೀರಿನ ಪ್ರತಿ ಪದರವೂ ಬೇರೆ ಬೇರೆ ಪ್ರಮಾಣದ ಉಷ್ಣಾಂಶ ಹೊಂದಿರುತ್ತದೆ. ಹೀಗಾಗಿ ಒಟ್ಟು ಸಾಗರದ ಮೇಲ್ಮೈ ಹಾಗೂ ಆಳದ ಸರಾಸರಿ ಉಷ್ಣಾಂಶ ಕಂಡುಹಿಡಿಯುವುದು ಒಂದು ಸವಾಲಾಗಿತ್ತು. ಈ ಅಡೆತಡೆಗಳನ್ನು ದಾಟುವಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ವಿ.ವಿ. ಸಂಶೋಧಕರು ಯಶಸ್ವಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry