ಬುಧವಾರ, ಜೂಲೈ 8, 2020
29 °C

ಆಸ್ಟ್ರೇಲಿಯಾ ಓಪನ್‌ಗೆ ಮರ‍್ರೆ ಇಲ್ಲ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಆಸ್ಟ್ರೇಲಿಯಾ ಓಪನ್‌ಗೆ ಮರ‍್ರೆ ಇಲ್ಲ

ಸಿಡ್ನಿ: ಮೊಣಕಾಲಿಗೆ ಗಾಯಗೊಂಡು ಬಳಲುತ್ತಿರುವ ಆ್ಯಂಡಿ ಮರ್ರೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ. ಹೀಗಾಗಿ ವರ್ಷದ ಮೊದಲ ಪ್ರತಿಷ್ಠಿತ ಟೂರ್ನಿಯಿಂದ ಇಬ್ಬರು ಹೊರಗುಳಿದಂತಾಗಿದೆ. ಜಪಾನ್‌ನ ಕೀ ನಿಶಿಕೋರಿ ಅವರು ಈ ಮೊದಲೇ ಆಡುವುದಿಲ್ಲ ಎಂದು ಘೋಷಿಸಿದ್ದರು.

ಕಳೆದ ವರ್ಷ ಗಾಯಕ್ಕೆ ತುತ್ತಾಗಿದ್ದ ಮರ್ರೆ ವಿಂಬಲ್ಡನ್‌ನ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸೋತಿದ್ದರು. ನಂತರ ಎಟಿಪಿ ಟೂರ್‌ನಲ್ಲಿ ಪಾಲ್ಗೊಂಡಿರಲಿಲ್ಲ.

‘ಸ್ಪರ್ಧೆಗೆ ಇಳಿಯಲು ಸಿದ್ಧನಾಗಿಲ್ಲ. ಆದ್ದರಿಂದ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡದೇ ಇರಲು ನಿರ್ಧರಿಸಿರುವ ವಿಷಯವನ್ನು ಬೇಸರದಿಂದ ಹೇಳಿಕೊಳ್ಳುತ್ತಿದ್ದೇನೆ. ತಾಯ್ನಾಡಿಗೆ ಮರಳಿ ಮುಂದಿನ ಟೂರ್ನಿಗಳಲ್ಲಿ ಆಡುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೇನೆ ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.