8ರಿಂದ ಭಾರತ ಯೋಗ ಯಾತ್ರೆ

7

8ರಿಂದ ಭಾರತ ಯೋಗ ಯಾತ್ರೆ

Published:
Updated:

ಬೆಂಗಳೂರು: ಆತ್ಮದರ್ಶನ ಯೋಗಾಶ್ರಮ ಇದೇ 8 ಮತ್ತು 9ರಂದು ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ಭಾರತ ಯೋಗ ಯಾತ್ರೆ–2018 ಕಾರ್ಯಕ್ರಮ ಹಮ್ಮಿಕೊಂಡಿದೆ.

‘ಕವಳೆ ಮಠದ ಶಿವಾನಂದ ಸರಸ್ವತಿ ಸ್ವಾಮೀಜಿ, ಸತ್ಯಾನಂದ ಸ್ವಾಮೀಜಿ, ಬಿಹಾರ ಯೋಗ ವಿದ್ಯಾಲಯದ ನಿರಂಜನಾನಂದ ಸರಸ್ವತಿ ಸ್ವಾಮೀಜಿ ಹಾಗೂ ವಿಶ್ವ ಯೋಗ ಪೀಠದ ಸನ್ಯಾಸಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಆಶ್ರಮ ಪ್ರಕಟಣೆಯಲ್ಲಿ ತಿಳಿಸಿದೆ.

ಎರಡು ದಿನಗಳೂ ಬೆಳಿಗ್ಗೆ 6.30ರಿಂದ 8.30ರವರೆಗೆ ’ಆಧ್ಯಾತ್ಮಿಕ ಜೀವನದೆಡೆಗೆ’ ಹಾಗೂ ಸಂಜೆ 6.30ರಿಂದ 8.30ರವರೆಗೆ ‘ನಿಮ್ಮನ್ನು ಅರಿಯಿರಿ–ದಿವ್ಯತ್ವ ಹೊಂದಿರಿ’ ಎಂಬ ಕಾರ್ಯಕ್ರಮ ಇರುತ್ತದೆ. 7ರಂದು ಸಂಜೆ 6.30ರಿಂದ 8.30ರವರೆಗೆ ಆತ್ಮದರ್ಶನ ಯೋಗಾಶ್ರಮದಲ್ಲಿ ‌ಕಾರ್ಯಕ್ರಮ ಇರುತ್ತದೆ ಎಂದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry