ಚೀನಾದಲ್ಲಿ ಹಿಮ ಬಿರುಗಾಳಿಗೆ 13 ಮಂದಿ ಬಲಿ

7

ಚೀನಾದಲ್ಲಿ ಹಿಮ ಬಿರುಗಾಳಿಗೆ 13 ಮಂದಿ ಬಲಿ

Published:
Updated:
ಚೀನಾದಲ್ಲಿ ಹಿಮ ಬಿರುಗಾಳಿಗೆ 13 ಮಂದಿ ಬಲಿ

ಬೀಜಿಂಗ್‌: ಚೀನಾದ ಪೂರ್ವ ಭಾಗದಲ್ಲಿ ಅತಿಯಾದ ಹಿಮ ಬಿರುಗಾಳಿಯಿಂದ ಕಳೆದ ಮೂರು ದಿನಗಳಲ್ಲಿ 13 ಜನ ಸಾವಿಗೀಡಾಗಿರುವುದಾಗಿ ವರದಿಯಾಗಿದೆ.

2008ರ ನಂತರ ಕಾಣಿಸಿಕೊಂಡಿರುವ ತೀವ್ರವಾದ ಹಿಮ ಬಿರುಗಾಳಿ ಇದಾಗಿದ್ದು, ಇದರ ಪರಿಣಾಮ ಈವರೆಗೂ 10.6 ಲಕ್ಷಕ್ಕೂ ಅಧಿಕ ಜನರಿಗೆ ತೊಂದರೆಯಾಗಿರುವುದಾಗಿ ಸರ್ಕಾರಿ ಸ್ವಾಮ್ಯದ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಆರ್ಥಿಕ ಆಘಾತ

ಅನ್ಹುಯ್‌, ಹೆನನ್‌, ಹುನನ್‌, ಜಿಯಾಂಗ್ಸು ಸೇರಿ ಒಂಬತ್ತು ನಗರಗಳು ಅಧಿಕ ಹಿಮ ಮಾರುತಕ್ಕೆ ಒಳಗಾಗಿವೆ. ಇದರಿಂದ ₹1203 ಕೋಟಿ(190 ಮಿಲಿಯನ್‌ ಡಾಲರ್‌)ಯಷ್ಟು ಆರ್ಥಿಕ ಹೊರೆ ಹಾಗೂ ಕೃಷಿ ವಲಯದಲ್ಲಿ ₹772 ಕೋಟಿ(122 ಮಿಲಿಯನ್‌ ಡಾಲರ್‌)ಯಷ್ಟು ನಷ್ಟ ಉಂಟಾಗಿರುವುದಾಗಿ ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry