ಶನಿವಾರ, ಜೂಲೈ 4, 2020
21 °C

ವಿರಾಟ್ ಕಳಪೆ ಪ್ರದರ್ಶನ: ಟ್ರೋಲ್‍ಗೆ ಗುರಿಯಾದ ವಿರುಷ್ಕಾ ದಂಪತಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ವಿರಾಟ್ ಕಳಪೆ ಪ್ರದರ್ಶನ: ಟ್ರೋಲ್‍ಗೆ ಗುರಿಯಾದ ವಿರುಷ್ಕಾ ದಂಪತಿ

ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಶುಕ್ರವಾರ ನಡೆದ ಮೊದಲ ಟೆಸ್ಟ್ ಇನಿಂಗ್ಸ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಕೇವಲ 5 ರನ್‌ಗೆ ಔಟ್‌ ಆಗಿರುವ ಕಾರಣಕ್ಕೆ ಟ್ರೋಲ್‌ಗೆ ಗುರಿಯಾಗಿದ್ದಾರೆ.

ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಟ್ರೋಲ್‌ಗೆ ಆಹಾರವಾಗಿದ್ದಾರೆ. ಅನುಷ್ಕಾ ಅವರನ್ನು ವಿವಾಹದ ನಂತರ ಆಡಿದ ಮೊದಲ ಇನಿಂಗ್ಸ್‌ನಲ್ಲಿ ಕೊಹ್ಲಿ ತೋರಿದ ಕಳಪೆ ಪ್ರದರ್ಶನಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲವೊಂದು ಟ್ವೀಟ್‍ಗಳು ಹೀಗಿವೆ:ಕೊಹ್ಲಿ ಅವರ ಹನಿಮೂನ್ ಇದೀಗ ಅಧಿಕೃತವಾಗಿ ಮುಕ್ತಾಯಗೊಂಡಿದೆ.

ವಿರಾಟ್ ಅವರು ಕೇವಲ 5 ರನ್ ಪೇರಿಸಿದ್ದಕ್ಕೆ ಅನುಷ್ಕಾ ಶರ್ಮಾ ಭಯಗೊಂಡಿದ್ದಾರೆ.

ಅನುಷ್ಕಾ ಶರ್ಮಾ ಅವರು ಯಾವಾಗಲೂ ದುರದೃಷ್ಟವಂತರು

ಕೇವಲ 5 ರನ್ ಗಳಿಸುವ ಮೂಲಕ ಅವರ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದ್ದಾರೆ. ಅನುಷ್ಕಾ: ಕೊನೆಯದಾಗಿ ಐದು ರನ್ ಆದರೂ ಗಳಿಸಿದ್ದಾರೆ. ದೇವರಿಗೆ ಅಭಿನಂದನೆ ಸಲ್ಲಿಸುತ್ತೇನೆ

ವಿರಾಟ್ ಅವರು ಕ್ರಿಕೆಟ್‌ ಬಗ್ಗೆ ಗಮನಹರಿಸಬೇಕು. ಅನುಷ್ಕಾ ಅವರ ಜತೆ ಊಟ ಮಾಡುವುದರ ಕಡೆ ಅಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.