ಸೋಮವಾರ, ಜೂಲೈ 6, 2020
21 °C

ಹೊಸ ಎತ್ತರಕ್ಕೆ ಷೇರುಪೇಟೆ

ಪಿಟಿಐ Updated:

ಅಕ್ಷರ ಗಾತ್ರ : | |

ಹೊಸ ಎತ್ತರಕ್ಕೆ ಷೇರುಪೇಟೆ

ಮುಂಬೈ: ಹೊಸ ವರ್ಷದ ವಾರದ ವಹಿವಾಟಿನ ಮೂರು ದಿನವೂ ಇಳಿಮುಖ ಚಲನೆಯಲ್ಲಿದ್ದ ಸೂಚ್ಯಂಕಗಳು ಕೊನೆಯ ಎರಡು ದಿನಗಳಲ್ಲಿ ಚೇತರಿಕೆ ಹಾದಿಗೆ ಮರಳಿದವು. ಇದರಿಂದ ಸತತ ಐದನೇ ವಾರವೂ ಸೂಚ್ಯಂಕಗಳ ಏರುಮಖ ಚಲನೆ ಮುಂದುವರಿಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಗುರುವಾರದ ವಹಿವಾಟಿನಲ್ಲಿ ಸೂಚ್ಯಂಕ 176 ಅಂಶ ಏರಿಕೆ ಕಾಣುವ ಮೂಲಕ ಹೊಸ ವರ್ಷದಲ್ಲಿ ಮೊದಲ ಚೇತರಿಕೆ ಕಂಡಿತು. ಶುಕ್ರವಾರ ಸಾರ್ವಕಾಲಿಕ ದಾಖಲೆ ಮಟ್ಟವನ್ನೂ ತಲುಪಿತು.

ಒಟ್ಟಾರೆ ವಾರದ ವಹಿವಾಟಿನಲ್ಲಿ 97 ಅಂಶ ಹೆಚ್ಚಾಗಿ ಸಾರ್ವಕಾಲಿಕ ದಾಖಲೆ ಮಟ್ಟವಾದ 34,154 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 28 ಅಂಶ ಹೆಚ್ಚಾಗಿ ಹೊಸ ಗರಿಷ್ಠ ಮಟ್ಟವಾದ 10,559 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಕಂಡಿತು.

ದೇಶಿ ಮತ್ತು ವಿದೇಶಿ ಹೂಡಿಕೆ ಹೆಚ್ಚಾಗಿರುವುದು, ಸೇವಾ ವಲಯದ ಪ್ರಗತಿ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿವೆ. ಸರ್ಕಾರಿ ಬ್ಯಾಂಕ್‌ಗಳ ಪುನರ್ಧನ ಉದ್ದೇಶಕ್ಕೆ ₹ 80,000 ಕೋಟಿ ಹೆಚ್ಚುವರಿ ವೆಚ್ಚಕ್ಕೆ ಕೇಂದ್ರ ಸರ್ಕಾರವು ಸಂಸತ್ ಒಪ್ಪಿಗೆ ಕೇಳಿರುವುದು ಬ್ಯಾಂಕಿಂಗ್ ಷೇರುಗಳ ಮೌಲ್ಯ ಏರಿಕೆಗೆ ನೆರ ವಾಯಿತು ಎಂದು ತಜ್ಞರು ಹೇಳಿದ್ದಾರೆ.

ಬಂಡವಾಳ ಸರಕುಗಳು, ವಿದ್ಯುತ್‌, ಆರೋಗ್ಯ ಸೇವೆ, ರಿಯಲ್‌ ಎಸ್ಟೇಟ್‌, ಬ್ಯಾಂಕ್‌ ಮತ್ತು ಎಫ್‌ಎಂಸಿಜಿ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾದವು. ತೈಲ ಮತ್ತು ಅನಿಲ, ವಾಹನ, ಐ.ಟಿ, ತಂತ್ರಜ್ಞಾನ ವಲಯದ ಷೇರುಗಳು ಲಾಭ ಗಳಿಕೆ ಉದ್ದೇಶದ ವಹಿವಾಟಿಗೆ ಒಳಗಾದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.