ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಸ್‌ ಚಟುವಟಿಕೆಗೆ ಜಿಎಸ್‌ಟಿ ಗುಮ್ಮ

Last Updated 6 ಜನವರಿ 2018, 19:55 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (ಬಿಟಿಸಿ) ರೇಸಿಂಗ್‌ ಚಟುವಟಿಕೆ ಆರಂಭಗೊಂಡದ್ದು ಆಸಕ್ತರ ಕುತೂಹಲ ಕೆರಳಿಸಿದೆ. ಆದರೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಗುಮ್ಮ ಇಲ್ಲಿ ಹಲವರಲ್ಲಿ ಆತಂಕ ಮೂಡಿಸಿತ್ತು.

ಸರ್ಕಾರ ಮತ್ತು ಬಿಟಿಸಿ ನಡುವಿನ ಹಗ್ಗ ಜಗ್ಗಾಟದ ಕಾರಣ ನಾಲ್ಕು ತಿಂಗಳಿಂದ ರೇಸಿಂಗ್ ಚಟುವಟಿಕೆ ನಡೆದಿರಲಿಲ್ಲ. ಬಿಟಿಸಿಯಲ್ಲಿ ರೇಸ್ ನಡೆಸಲು ಸರ್ಕಾರ ಎರಡು ದಿನಗಳ ಹಿಂದೆ ಅನುಮತಿ ನೀಡಿತ್ತು. ಶನಿವಾರ ನಡೆದ ರೇಸ್‌ನಲ್ಲಿ ಒಟ್ಟು ಒಂಬತ್ತು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಜಿಎಸ್‌ಟಿ ಅನುಸಾರ ಬಿಟಿಸಿ ವಹಿವಾಟಿನಿಂದ ಬರುವ ಒಟ್ಟು ಆದಾಯದ ಶೇ 28 ಅನ್ನು ಸರ್ಕಾರಕ್ಕೆ ಪಾವತಿಸಬೇಕಾಗಿದೆ. ಈ ಹಿಂದೆ ಸೇವೆ ಮತ್ತು ಮನರಂಜನೆ ತೆರಿಗೆ ಮಾತ್ರವಲ್ಲದೆ ಶೇ 8ರಷ್ಟು ಬೆಟ್ಟಿಂಗ್ ತೆರಿಗೆಯನ್ನು ಸರ್ಕಾರಕ್ಕೆ ನೀಡಿತ್ತು. ಹೊಸ ತೆರಿಗೆ ಮಾದರಿಯ ಪ್ರಕಾರ ಎಷ್ಟು ಪಾವತಿಸಬೇಕು ಎಂಬುದರ ಬಗ್ಗೆ ಈಗ ಲೆಕ್ಕಾಚಾರ ನಡೆಯುತ್ತಿದೆ.

‘ಒಂದೆಡೆ ಕುಳಿತು ಈ ಬಗ್ಗೆ ಚರ್ಚಿಸಬೇಕಾಗಿದೆ. ಹೊಸ ಪದ್ಧತಿಯಿಗೆ ಒಗ್ಗಿಕೊಳ್ಳಲು ಬಿಟಿಸಿ ಪ್ರಯತ್ನಿಸಲಿದೆ’ ಎಂದು ಅಧ್ಯಕ್ಷ ಹರಿಮೋಹನ ನಾಯ್ಡು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT