ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಬಾರ್‌ ನೋಡಿ ದರ್ಬಾರ್

Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ಅರಸೊತ್ತಿಗೆ ಕಾಲ ಮುಗಿದೋಯ್ತು. ಅರಮನೆ, ರಾಜ, ಅರಸೊತ್ತಿಗೆ, ದರ್ಬಾರು ಈಗ ಇಲ್ಲ. ಆದರೆ ರಾಜ ದರ್ಬಾರಿನ ದೃಶ್ಯಗಳನ್ನು ಜನರಿಗೆ ತಲುಪಿಸಲು ಕ್ಷತ್ರಿಯ ಸಮುದಾಯವು ನಗರದಲ್ಲಿ ವಿಭಿನ್ನ ಫ್ಯಾಷನ್‌ ಷೋ ಆಯೋಜಿಸಿತ್ತು.

ಈಚೆಗೆ ಹೊಟೇಲ್ ಲಲಿತ್ ಅಶೋಕದಲ್ಲಿ ನಡೆದ ರಾಜ ದರ್ಬಾರಿನ ವೇದಿಕೆಯಲ್ಲಿ 50ಕ್ಕೂ ಹೆಚ್ಚು ರಾಜ ರಾಣಿಯರು ಜರತಾರಿ ಸೀರೆ, ಮೈತುಂಬಾ ಒಡವೆ ಹೇರಿಕೊಂಡು ಕ್ಯಾಮೆರಾ ಕಣ್ಣುಗಳಿಗೆ ಸಿಕ್ಕಿಬಿದ್ದರು.

ಮಾಹಿಷ್ಮತಿ ಸಾಮ್ರಾಜ್ಯದ ಬಾಹುಬಲಿ, ದೇವಸೇನಾ, ಅವಂತಿಕಾ, ರಾಜಮಾತೆ ಶಿವಗಾಮಿದೇವಿ ಷೋದ ಆಕರ್ಷಣೆಯಾಗಿದ್ದರೆ, ಕೆಚ್ಚೆದೆಯ ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಪದ್ಮಾವತಿ, ಶ್ರೀಕೃಷ್ಣದೇವರಾಯ, ಶ್ರೀಕಂಠದತ್ತ ಒಡೆಯರ್ ಮತ್ತು ಪಂಚ ಪಾಂಡವರ ವೇಷದಲ್ಲಿ ರೂಪದರ್ಶಿಗಳು ಹೆಜ್ಜೆ ಹಾಕಿದರು.

*

*

*

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT