ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈಲುಗಳಾಗುತ್ತಿವೆ ರದ್ದಾದ ನೋಟುಗಳು

ಚೆನ್ನೈನ ಪುಳಲ್ ಕೇಂದ್ರ ಕಾರಾಗೃಹದಲ್ಲಿ ‘ಫೈಲ್‌ ಪ್ಯಾಡ್‌’ ತಯಾರಿಕೆ
Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ಚೆನ್ನೈ: ರದ್ದಾದ ₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳಿಗೆ ಇಲ್ಲಿನ ಪುಳಲ್ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಖೈದಿಗಳು  ಹೊಸರೂಪ ನೀಡುತ್ತಿದ್ದಾರೆ.

ರದ್ದಾದ ನೋಟುಗಳನ್ನು ಪುಡಿ ಮಾಡಿ, ಅದರಿಂದ ಗಟ್ಟಿ ರಟ್ಟಿನ ಫೈಲುಗಳನ್ನು (ಫೈಲ್‌ ಪ್ಯಾಡ್‌) ತಯಾರಿಸುವ ಕೆಲಸ ಈ ಜೈಲಿನಲ್ಲಿ ನಡೆಯುತ್ತಿದೆ. ಈ ಫೈಲುಗಳನ್ನು ತಮಿಳುನಾಡು ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಬಳಸಲಾಗುತ್ತಿದೆ.

ತಮಿಳುನಾಡಿನ ವೆಲ್ಲೂರ್, ಸೇಲಂ, ಮದುರೆ ಮತ್ತು ಪುಳಲ್ ಕಾರಾಗೃಹವೂ ಸೇರಿ ಆರು ಕಾರಾಗೃಹಗಳಲ್ಲಿ ಇಂತಹ ಫೈಲುಗಳನ್ನು ತಯಾರಿಸುವ ಘಟಕಗಳಿವೆ. ಆದರೆ ಪುಳಲ್ ಕಾರಾಗೃಹದಲ್ಲಿ ಮಾತ್ರ ರದ್ದಾದ ನೋಟುಗಳನ್ನು ಕಚ್ಚಾವಸ್ತುವಾಗಿ ಬಳಸಿಕೊಂಡು ಗಟ್ಟಿ ರಟ್ಟಿನ ಫೈಲುಗಳನ್ನು ತಯಾರಿಸಲಾಗುತ್ತಿದೆ. ಆರೂ ಜೈಲುಗಳಲ್ಲಿ ಪ್ರತಿ ತಿಂಗಳು ಇಂತಹ 1.5 ಲಕ್ಷ ಫೈಲುಗಳನ್ನು ತಯಾರಿಸಲಾಗುತ್ತದೆ.

ಪುಟಿ ಒಣಗಿ ಫೈಲಾಗಿ...

* ಪುಡಿ ರೂಪದಲ್ಲಿರುವ ನೋಟುಗಳನ್ನು ಮೊದಲು ದೊಡ್ಡ ಬೋಗುಣಿಯೊಂದರಲ್ಲಿ ಸುರಿದು, ಅದನ್ನು ನೀರು ಮತ್ತು ಅಂಟಿನೊಂದಿಗೆ ಮಿಶ್ರ ಮಾಡಲಾಗುತ್ತದೆ

* ಮಿಶ್ರಣವನ್ನು ಅಚ್ಚುಗಳಲ್ಲಿ ಸುರಿದು, ಒಣಗಲು ಬಿಡಲಾಗುತ್ತದೆ. ಆಗ ರಟ್ಟು ಸಿದ್ಧವಾಗುತ್ತದೆ

* ರಟ್ಟುಗಳ ಅಂಚಿಗೆ ಬಟ್ಟೆ ಅಂಟಿಸಲಾಗುತ್ತದೆ. ಎರಡು ರಟ್ಟುಗಳನ್ನು ಬಟ್ಟೆಯ ಮೂಲಕ ಅಂಟಿಸಿ ಜೋಡಿಸಲಾಗುತ್ತದೆ. ಫೈಲು ಸಿದ್ಧವಾಗುತ್ತದೆ

* ಸದ್ಯ ಇವಿಷ್ಟೂ ಪ್ರಕ್ರಿಯೆ ಯಾವುದೇ ಯಂತ್ರಗಳ ನೆರವಿಲ್ಲದೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅರೆಸ್ವಯಂಚಾಲಿತ ಯಂತ್ರಗಳನ್ನು ಅಳವಡಿಸಲಾಗುವುದು ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT