‘ರಾಜು ಕನ್ನಡ ಮೀಡಿಯಂ’ನಲ್ಲಿ ರಷ್ಯನ್ ಬೆಡಗಿ!

7

‘ರಾಜು ಕನ್ನಡ ಮೀಡಿಯಂ’ನಲ್ಲಿ ರಷ್ಯನ್ ಬೆಡಗಿ!

Published:
Updated:
‘ರಾಜು ಕನ್ನಡ ಮೀಡಿಯಂ’ನಲ್ಲಿ ರಷ್ಯನ್ ಬೆಡಗಿ!

ಗುರುನಂದನ್ ಅಭಿನಯಿಸಿರುವ ‘ರಾಜು ಕನ್ನಡ ಮೀಡಿಯಂ’ ಚಿತ್ರ ಜನವರಿ 19ರಂದು ಬಿಡುಗಡೆಯಾಗುತ್ತಿದ್ದು, ಈ ಚಿತ್ರವನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ತೆರೆಯ ಮೇಲೆ ತರಲು ನಿರ್ಮಾಪಕ ಕೆ.ಎ. ಸುರೇಶ್ ಯೋಜನೆ ಹಾಕಿಕೊಂಡಿದ್ದಾರಂತೆ!

ಕಿಚ್ಚ ಸುದೀಪ್ ಅವರು ಈ ಸಿನಿಮಾದಲ್ಲಿ ವಿಭಿನ್ನವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಮಧ್ಯಂತರದ ನಂತರ ಸುದೀಪ್‌ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈವರೆಗೆ ದೊರೆತಿರುವ ಸುದ್ದಿ. ಸುದೀಪ್ ಅವರೇ ಈ ಚಿತ್ರದ ಪ್ರಧಾನ ಆಕರ್ಷಣೆಯಾಗಿ ಬಿಂಬಿತರಾಗಿದ್ದಾರೆ ಎನ್ನುವುದು ಚಿತ್ರತಂಡದ ಅಂಬೋಣ.

ಗುರುನಂದನ್ ಅವರಿಗೆ ಜೋಡಿಯಾಗಿ ಅವಂತಿಕಾ ಶೆಟ್ಟಿ ಹಾಗೂ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ ಎಂಬುದಷ್ಟೇ ಬಹುತೇಕರಿಗೆ ಗೊತ್ತಿರುವ ವಿಷಯ. ಆದರೆ ಚಿತ್ರದಲ್ಲಿ ಮತ್ತೊಬ್ಬ ನಾಯಕಿಯೂ ಇದ್ದಾರೆ. ಅವರು ರಷ್ಯಾ ಮಾಡೆಲ್ ಏಂಜಲಿನಾ! ಏಂಜಲಿನಾ ಅಭಿನಯಿಸಿರುವ ಭಾಗಗಳ ಚಿತ್ರೀಕರಣವು ವಿದೇಶದಲ್ಲೇ ನಡೆದಿದೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry