ಬುಧವಾರ, ಜೂಲೈ 8, 2020
29 °C

ತಜ್ಞರ ಸಮಿತಿಯಿಂದ ಕಾಲಾವಕಾಶ ಕೋರಿಕೆ: ವಿನಯ ಕುಲಕರ್ಣಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ವೀರಶೈವ- ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ನಿಗದಿಪಡಿಸಿರುವ ಕಾಲಾವಕಾಶವನ್ನು ವಿಸ್ತರಿಸುವಂತೆ ಕೋರುವುದಾಗಿ ತಜ್ಞರ ಸಮಿತಿ ಹೇಳಿರುವುದಕ್ಕೆ, ಸಚಿವ ವಿನಯ ಕುಲಕರ್ಣಿ ಅಸಮಾಧಾನ

ವ್ಯಕ್ತಪಡಿಸಿದ್ದಾರೆ.

‘ಲಿಂಗಾಯತ ಸಮುದಾಯ ತೊಂದರೆಯಲ್ಲಿ ಇರುವುದರಿಂದ ನಾವು ಹೋರಾಟ ಮಾಡುತ್ತಿದ್ದೇವೆ. ಸಮಿತಿ ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕಿತ್ತು. ಇದೀಗ ಆರು ತಿಂಗಳು ಕಾಲಾವಕಾಶ ಕೇಳಲು ಮುಂದಾಗಿರುವುದು ನಮಗೆ ಅಸಮಾಧಾನ ತಂದಿದೆ. ಈ ಕುರಿತು ನಾಳೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ’ ಎಂದು ಅವರು ಭಾನುವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಈ ಹೋರಾಟ ಕೇವಲ ಚುನಾವಣೆಗೆ ಸೀಮಿತ ಎಂದು ಹೇಳಿರುವ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಪರವಾಗಿಲ್ಲ. ಹೀಗಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಹೋರಾಟ ನಿರಂತರವಾದುದು. ಮಲ್ಲಿಕಾರ್ಜುನ ಅವರಿಗೆ ಇದೆಲ್ಲ ತಿಳಿದಿಲ್ಲ’ ಎಂದು ಸಚಿವ ವಿನಯ ಕುಲಕರ್ಣಿ ಅವರು ಹೇಳಿದರು.

* * 

ಅಖಿಲ ಭಾರತ ವೀರಶೈವ ಮಹಾಸಭಾ ಹೆಸರಿನಲ್ಲಿ ಲಿಂಗಾಯತ ಪದ ಸೇರಿಸುವ ಬದಲು, ವೀರಶೈವ ಪದವನ್ನೇ ತೆಗೆದು ಅಖಿಲ ಭಾರತ ಲಿಂಗಾಯತ ಮಹಾಸಭಾ ಎಂದು ಬದಲಾಯಿಸಿದರೆ ಒಳ್ಳೆಯದು

ಬಸವಜಯ ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಪೀಠ, ಕೂಡಲಸಂಗಮ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.