ರೈಲ್ವೆ ಯೋಜನೆಗಳ ಮೇಲ್ವಿಚಾರಣೆಗೆ ಡ್ರೋನ್‌ ಬಳಕೆ

7

ರೈಲ್ವೆ ಯೋಜನೆಗಳ ಮೇಲ್ವಿಚಾರಣೆಗೆ ಡ್ರೋನ್‌ ಬಳಕೆ

Published:
Updated:
ರೈಲ್ವೆ ಯೋಜನೆಗಳ ಮೇಲ್ವಿಚಾರಣೆಗೆ ಡ್ರೋನ್‌ ಬಳಕೆ

ನವದೆಹಲಿ: ಯೋಜನೆಗಳ ಮೇಲ್ವಿಚಾರಣೆ, ಕಾಮಗಾರಿ ನಿರ್ವಹಣೆಗೆ ಭಾರತೀಯ ರೈಲ್ವೆ ಡ್ರೋನ್‌ಗಳನ್ನು ಬಳಸಲು ನಿರ್ಧರಿಸಿದೆ.

ಡಿಆರ್‌ಡಿಒ ಅಭಿವೃದ್ಧಿ ಪಡಿಸಿರುವ ಕ್ಯಾಮೆರಾ ಒಳಗೊಂಡ ಮಾನವರಹಿತ ಹಾರಾಟ ವಾಹನ(ನೇತ್ರ)ಗಳನ್ನು ಯೋಜನೆ ಮೇಲ್ವಿಚಾರಣೆಗೆ ಬಳಕೆ ಮಾಡುವುದಾಗಿ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ರೈಲ್ವೆ ಮಾರ್ಗ ನಿರ್ವಹಣೆ ಹಾಗೂ ರೈಲ್ವೆ ಸಂಚಾರಕ್ಕೆ ಸಂಬಂಧಿಸಿದ ಇತರ ಕಾರ್ಯಗಳನ್ನು ಗಮನಿಸಲು ಡ್ರೋನ್ ಕ್ಯಾಮೆರಾ ಬಳಕೆಗೆ ಈಗಾಗಲೇ ರೈಲ್ವೆ ವಲಯಗಳಿಗೆ ಸೂಚಿಸಲಾಗಿದೆ.

ರಿಮೋಟ್‌ ಮೂಲಕ ನಿಯಂತ್ರಿಸಬಹುದಾದ ಡ್ರೋನ್‌ಗಳ ಬಳಕೆಯಿಂದ ರೈಲ್ವೆ ಸುರಕ್ಷತೆ ಹಾಗೂ ಕಾರ್ಯಕ್ಷಮತೆ ಹೆಚ್ಚಿಸುವುದು ಸಾಧ್ಯ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry