ಮಂಗಳವಾರ, ಆಗಸ್ಟ್ 4, 2020
22 °C

ಕ್ರಿಕೆಟ್‌ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ರಾಷ್ಟ್ರಗೀತೆ ಹಾಡಿದ ಎರಡು ತಂಡಗಳ ವಿರುದ್ಧ ಪ್ರಕರಣ ದಾಖಲು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕ್ರಿಕೆಟ್‌ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ರಾಷ್ಟ್ರಗೀತೆ ಹಾಡಿದ ಎರಡು ತಂಡಗಳ ವಿರುದ್ಧ ಪ್ರಕರಣ ದಾಖಲು

ಶ್ರೀನಗರ: ಕಾಶ್ಮೀರದ ಬಂಡಿಪೋರ ಜಿಲ್ಲೆಯಲ್ಲಿ ಕ್ರಿಕೆಟ್‌ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ರಾಷ್ಟ್ರಗೀತೆ ಹಾಡಿದ ಆರೋಪದ ಮೇಲೆ ಎರಡು ತಂಡಗಳ ವಿರುದ್ಧ ದೂರು ದಾಖಲಿಸಿಕೊಂಡು, ಕೆಲವು ಆಟಗಾರರನ್ನು ಬಂಧಿಸಲಾಗಿದೆ.

ಜನವರಿ 3 ರಂದು ಪಂದ್ಯ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಒಂದು ತಂಡದ ಆಟಗಾರರು ಹಸಿರು ಹಾಗೂ ಮತ್ತೊಂದು ತಂಡದ ಆಟಗಾರರು ಬಿಳಿ ಬಣ್ಣದ ಸಮವಸ್ತ್ರ ಧರಿಸಿ, ಪರಸ್ಪರ ಎದುರು ಬದುರು ನಿಂ‌ತು ಪಾಕಿಸ್ತಾನ ರಾಷ್ಟ್ರಗೀತೆ ಹಾಡಿರುವುದು ವಿಡಿಯೊದಲ್ಲಿ‌ ಸೆರೆಯಾಗಿದೆ.

ಪೊಲೀಸರು ಎರಡೂ ತಂಡಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದನ್ನು ಖಚಿತ ಪಡಿಸಿದ್ದಾರೆ. ಆದರೆ, ಎಷ್ಟು ಆಟಗಾರರನ್ನು ಬಂಧಿಸಲಾಗಿದೆ, ತಂಡಗಳ ಹೆಸರು ಏನು? ಇತರ ಮಾಹಿತಿ ಬಹಿರಂಗಪಡಿಸಿಲ್ಲ.

‌ನಾಲ್ವರನ್ನು ಬಂಧಿಸಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸ್ಥಳೀಯ ಕ್ರೀಡಾಕೂಟವೊಂದರ ಫೈನಲ್‌ ಪಂದ್ಯ ಇದಾಗಿದ್ದು, ಇಲ್ಲಿನ ಗೊಂದಿಪೋರಾದ ಎಂಸಿಸಿ ಹಾಗೂ ದಾರ್ದ್‌ಪೋರಾ ಕ್ರಿಕೆಟ್‌ ಕ್ಲಬ್‌ಗಳು ಫೈನಲ್‌ ತಲುಪಿದ್ದವು ಎಂದೂ ವರದಿ ಮಾಡಿವೆ.

ಈ ರೀತಿಯ ಪ್ರಕರಣ ಇದೇ ಮೊದಲಲ್ಲ. ಇದಕ್ಕೂ ಮೊದಲು ಇಂತಹ ಹಲವು ಪ್ರಕರಣಗಳು ಸುದ್ದಿಯಾಗಿವೆ. 

2017ರ ಏಪ್ರಿಲ್‌ನಲ್ಲಿ ಮಧ್ಯ ಕಾಶ್ಮೀರದ ಗಂದೆರ್ಬಲ್‌ ಜಿಲ್ಲೆಯಲ್ಲಿ ಇದೇ ಮಾದರಿಯ ಪ್ರಕರಣ ಬೆಳಕಿಗೆ ಬಂದಿತ್ತು. ಈ ವೇಳೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಸಮವಸ್ತ್ರ ಧರಿಸಿ, ಪಾಕಿಸ್ತಾನ ರಾಷ್ಟ್ರಗೀತೆ ಹಾಡಿದ ಆರೋಪದ ಮೇಲೆ ಕನಿಷ್ಠ 11 ಆಟಗಾರರನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.