ಸೋಮವಾರ, ಜೂಲೈ 13, 2020
28 °C

ಧೈರ್ಯವಂತ ಬೇಕು

ಎಂ. ವೆಂಕಟಪ್ಪ Updated:

ಅಕ್ಷರ ಗಾತ್ರ : | |

ರಾಜಕಾರಣಿಗಳು, ಸಾಹಿತಿಗಳು, ಕಲಾವಿದರು ಇತ್ತೀಚೆಗೆ ಬಳಸುತ್ತಿರುವ ಭಾಷೆ ಅವರ ಘನತೆ, ಗೌರವಗಳಿಗೆ ತಕ್ಕುದಾಗಿಲ್ಲ. ಒಮ್ಮೆ ಕೈವೊಡ್ಡಿ ಕುಳಿತಿದ್ದ ಭಾರತ ಇಂದು ತಲೆ ಎತ್ತಿ ನಿಂತಿದೆ. ಅಮೆರಿಕ, ಜಪಾನ್, ಬ್ರಿಟನ್‌, ಫ್ರಾನ್ಸ್‌ನಂತಹ ಮುಂದುವರಿದ ದೇಶಗಳು ಭಾರತಕ್ಕೆ ಗೌರವಯುತ ಸ್ಥಾನ ನೀಡಿವೆ. ಇದು ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಸಾಧ್ಯವಾಗಿದೆ.

ಲೇಖಕ ಡಾ. ನಟರಾಜ್ ಹುಳಿಯಾರ್‌ ಅವರು ದೇಶದ ಪ್ರಧಾನಿಯನ್ನು ಹಿಟ್ಲರನಿಗೆ ಹೋಲಿಸಿದ್ದಾರೆ (ಪ್ರ.ವಾ., ಡಿ. 31). ಅಭಿವ್ಯಕ್ತಿ ಸ್ವಾತಂತ್ರ್ಯ, ಅಸಹಿಷ್ಣುತೆ ಹೆಚ್ಚಿರುವುದರಿಂದಲೇ ಪ್ರಧಾನಿ ಬಗ್ಗೆ ಕೇವಲವಾಗಿ ಮಾತನಾಡಲು ಸಾಧ್ಯ ಎಂದು ನಿರೂಪಿಸಿದ್ದಾರೆ. ಭ್ರಷ್ಟರು, ದರೋಡೆಕೋರರು, ಅತ್ಯಾಚಾರಿಗಳು ಹಾಗೂ ದೇಶವನ್ನು ಲೂಟಿ ಮಾಡುವವರನ್ನು ಸದೆ ಬಡಿಯಲು ಹಿಟ್ಲರ್‌ನಂತಹ ಧೈರ್ಯವಂತ ದೇಶಾಭಿಮಾನಿ ಈ ನಾಡಿಗೆ ಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.