ಮಂಗಳವಾರ, ಆಗಸ್ಟ್ 11, 2020
24 °C

ವೃದ್ಧಿಮಾನ್‌ ಮೈಲುಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೃದ್ಧಿಮಾನ್‌ ಮೈಲುಗಲ್ಲು

ಕೇಪ್‌ಟೌನ್‌: ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಹಾ, ಸೋಮವಾರ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು.

ಅವರು ಟೆಸ್ಟ್‌ ಪಂದ್ಯವೊಂದರಲ್ಲಿ ಒಟ್ಟು 10 ಮಂದಿಯನ್ನು ಔಟ್‌ ಮಾಡಿದ ಭಾರತದ ಮೊದಲ ವಿಕೆಟ್‌ ಕೀಪರ್‌ ಎಂಬ ದಾಖಲೆ ತಮ್ಮದಾಗಿಸಿಕೊಂಡರು.

ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅವರಿಂದ ಈ ಸಾಧನೆ ಮೂಡಿಬಂತು. ಹರಿಣಗಳ ನಾಡಿನ ಎದುರಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಐದು ಕ್ಯಾಚ್‌ ಹಿಡಿದಿದ್ದ ವೃದ್ಧಿಮಾನ್‌, ಎರಡನೇ ಇನಿಂಗ್ಸ್‌ನಲ್ಲೂ ಐದು ಕ್ಯಾಚ್‌ ಪಡೆದರು. ಈ ಮೂಲಕ ಮಹೇಂದ್ರ ಸಿಂಗ್‌ ದೋನಿ ದಾಖಲೆ ಮೀರಿ ನಿಂತರು.

2014ರಲ್ಲಿ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಪಂದ್ಯದಲ್ಲಿ ದೋನಿ 9 ಮಂದಿಯನ್ನು ಔಟ್‌ ಮಾಡಿದ್ದು ಇದುವರೆಗಿನ ದಾಖಲೆ ಎನಿಸಿತ್ತು.  ಆ ಪಂದ್ಯದಲ್ಲಿ ಮಹಿ, ಎಂಟು ಕ್ಯಾಚ್‌ ಹಿಡಿದು ಒಂದು ಸ್ಟಂಪಿಂಗ್‌ ಮಾಡಿದ್ದರು.

ವೃದ್ಧಿಮಾನ್‌ ಟೆಸ್ಟ್‌ನಲ್ಲಿ ಅತಿ ಹೆಚ್ಚು ಔಟ್‌ (85) ಮಾಡಿದ ಭಾರತದ ಐದನೇ ವಿಕೆಟ್‌ ಕೀಪರ್‌ ಎನಿಸಿದರು. ಅವರು ಫಾರೂಕ್‌ ಎಂಜಿನಿಯರ್‌ (82 ಔಟ್‌) ಅವರನ್ನು ಹಿಂದಿಕ್ಕಿದರು. ಫಾರೂಕ್‌ 66 ಕ್ಯಾಚ್‌ ಹಿಡಿದಿದ್ದು, 16 ಸ್ಟಂಪಿಂಗ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.