ಉದ್ಯೋಗಕ್ಕೆ ಓಟು ಆಂದೋಲನದ ರಾಷ್ಟೀಯ ಸಂಚಾಲಕ ಚಂದ್ರ ಮಿಶ್ರ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ

7

ಉದ್ಯೋಗಕ್ಕೆ ಓಟು ಆಂದೋಲನದ ರಾಷ್ಟೀಯ ಸಂಚಾಲಕ ಚಂದ್ರ ಮಿಶ್ರ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ

Published:
Updated:
ಉದ್ಯೋಗಕ್ಕೆ ಓಟು ಆಂದೋಲನದ ರಾಷ್ಟೀಯ ಸಂಚಾಲಕ ಚಂದ್ರ ಮಿಶ್ರ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ

ಮೈಸೂರು: 'ಉದ್ಯೋಗಕ್ಕೆ ಓಟು ಆಂದೋಲನ' (ನೋ ಜಾಬ್ ನೋ ವೋಟ್) ಅಭಿಯಾನದ ರಾಷ್ಟೀಯ ಸಂಚಾಲಕ ಚಂದ್ರ ಮಿಶ್ರ ಎಂಬುವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಹಲ್ಲೆ ನಡೆಸಿದ್ದಾರೆ.

ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದ ಬಳಿ ಈ ದಾಳಿ ನಡೆದಿದೆ. ಪಾಲಿಕೆ ಸದಸ್ಯ ಪ್ರಶಾಂತ್ ಗೌಡ ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಬೆಳಿಗ್ಗೆ 10ರ ಸುಮಾರಿಗೆ ಅಭಿಯಾನದ ಸದಸ್ಯರೊಂದಿಗೆ ಪ್ರಚಾರ ಕೈಗೊಂಡಾಗ ಸ್ಥಳಕ್ಕೆ ಧಾವಿಸಿದ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿದ್ದಾರೆ. ಚಂದ್ರ ಮಿಶ್ರ ಅವರ ಮೂಗು ಹಾಗೂ ಬಾಯಿಯಿಂದ ರಕ್ತ ವಸರುವಂತೆ ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ಲಕ್ಷ್ಮಿಪುರಂ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭೆ ಕ್ಷೇತ್ರದಲ್ಲಿ ಅಭಿಯಾನ ನಡೆಸಲು ಉದ್ದೇಶಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry