ಪತ್ರಕರ್ತರ ಮೇಲಿನ ದೌರ್ಜನ್ಯ ಪ್ರತ್ಯೇಕ ಐಪಿಸಿ ಸೆಕ್ಷನ್‌ಗೆ ಒತ್ತಾಯ

7

ಪತ್ರಕರ್ತರ ಮೇಲಿನ ದೌರ್ಜನ್ಯ ಪ್ರತ್ಯೇಕ ಐಪಿಸಿ ಸೆಕ್ಷನ್‌ಗೆ ಒತ್ತಾಯ

Published:
Updated:
ಪತ್ರಕರ್ತರ ಮೇಲಿನ ದೌರ್ಜನ್ಯ ಪ್ರತ್ಯೇಕ ಐಪಿಸಿ ಸೆಕ್ಷನ್‌ಗೆ ಒತ್ತಾಯ

ನವದೆಹಲಿ: ಮಾಧ್ಯಮ ಪ್ರತಿನಿಧಿಗಳ ಮೇಲೆ ಹೆಚ್ಚುತ್ತಿರುವ ಹಲ್ಲೆ, ದೌರ್ಜನ್ಯ ಪ್ರಕರಣಗಳಿಗೆ  ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ಪ್ರತ್ಯೇಕ ಸೆಕ್ಷನ್‌ ರೂಪಿಸಲು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದ ವಿವೇಕ್‌ ಗುಪ್ತಾ ಶುಕ್ರವಾರ ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯರ ನಿರ್ಣಯ ಮಂಡಿಸಲಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯನ್ನು ಪ್ರಸ್ತಾಪಿಸಿರುವ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ. ಸಂಸದರಾಗುವ ಮೊದಲು ಗುಪ್ತಾ ಕೂಡ ಪತ್ರಕರ್ತರಾಗಿದ್ದರು.

ಕಳೆದ ಒಂದು ದಶಕದಿಂದ ಈಚೆಗೆ ದೇಶದಲ್ಲಿ ನಡೆದ ಮಾಧ್ಯಮ ಪ್ರತಿನಿಧಿಗಳ ಹತ್ಯೆಯ ಒಂದೂ ಪ್ರಕರಣವನ್ನೂ ಭೇದಿಸಿಲ್ಲ ಎಂಬ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ.

1992ರಿಂದ ಈಚೆಗೆ ಪತ್ರಕರ್ತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಪೈಕಿ ಶೇ 96 ತಾರ್ಕಿಕ ಅಂತ್ಯ ಕಂಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry