ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿ–ಗಾರ್ಡ್’ನ ಹೊಸ ಲಾಂಛನ

Last Updated 7 ಫೆಬ್ರುವರಿ 2018, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮುಖ ವಿದ್ಯುತ್‌ ಉಪಕರಣಗಳ ತಯಾರಿಕಾ ಸಂಸ್ಥೆ ವಿ–ಗಾರ್ಡ್, ಸಂಸ್ಥೆಯ ಹೊಸ ಲಾಂಛನವನ್ನು ಬಿಡುಗಡೆ ಮಾಡಿದೆ.

‘ಆಧುನಿಕ ತಂತ್ರಜ್ಞಾನ ಆಧಾರಿತ ಮತ್ತು ಸ್ಮಾರ್ಟ್ ಉಪಕರಣಗಳನ್ನು ತಯಾರಿಸುವ ಸಂಸ್ಥೆಯ ಉದ್ದೇಶವು ಸಮರ್ಥವಾಗಿ ಪ್ರತಿಬಿಂಬಿ
ಸುವ ರೀತಿಯಲ್ಲಿ ಹೊಸ ಲಾಂಛನ ಪರಿಚಯಿಸಲಾಗಿದೆ’ ಎಂದು  ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಿಥುನ್ ಚಿತ್ತಲಪಿಲ್ಲಿ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಳಿಸಿದರು.

‘ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಚಿನ್ನದ ವರ್ಣದಲ್ಲಿ ಸಂಸ್ಥೆಯ ಹೆಸರು ಬರೆಯಲಾಗಿದೆ. ಲಾಂಛನದಲ್ಲಿರುವ ಕಾಂಗರೂವನ್ನು ಪ್ರಗತಿಯ ಸೂಚಕದಂತೆ ಹೊಸ ವಿನ್ಯಾಸದಲ್ಲಿ ರಚಿಸಲಾಗಿದೆ. ‘ಉತ್ತಮ ನಾಳೆಗಾಗಿ ಮನೆಗೆ ತನ್ನಿ’ ಎಂಬ ಘೋಷವಾಕ್ಯವನ್ನೂ ಸೇರಿಸಲಾಗಿದೆ’ ಎಂದು ಹೇಳಿದರು.

‘ವಿ–ಗಾರ್ಡ್‌ ಅನ್ನು ಉತ್ತಮ ಹಾಗೂ ಪ್ರಾಮಾಣಿಕ ಬ್ರ್ಯಾಂಡ್ ಆಗಿ ರೂಪಿಸುವುದಷ್ಟೇ ಅಲ್ಲ.  ಗ್ರಾಹಕ ಸ್ನೇಹಿಯಾದ ಮತ್ತು ಉಪಯುಕ್ತಕರ ಉಪಕರಣಗಳನ್ನು ತಯಾರಿಸುವ ಗುರಿ ಹಾಕಿಕೊಳ್ಳಲಾಗಿದೆ’ ಎಂದರು.

‘ಮುಂದಿನ ತಲೆಮಾರಿನ ಅಗತ್ಯಗಳನ್ನು ಸಮರ್ಥವಾಗಿ ಪೂರೈಸುವ ರೀತಿಯಲ್ಲಿ ಸಂಸ್ಥೆಯ ಭವಿಷ್ಯ ರೂಪಿಸಲು ಅಡಿಗಲ್ಲು ಹಾಕಿದ್ದೇವೆ’ ಎಂದು ಸಂಸ್ಥೆಯ ನಿರ್ದೇಶಕ ವಿ. ರಾಮಚಂದ್ರನ್ ಹೇಳಿದರು. ‘ಈ ಮೂಲಕ ಮಾರುಕಟ್ಟೆ ಮತ್ತು ತಂತ್ರಜ್ಞಾನ ಸ್ಪರ್ಧೆಯನ್ನು ಮೆಟ್ಟಿನಿಲ್ಲಲು ಸಾಧ್ಯವಾಗಲಿದೆ. ಹೊಸ ಯೋಜನೆಗಳಿಂದ ಸಂಸ್ಥೆಯು ಇನ್ನೂ 40 ವರ್ಷ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಬಹುದು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಹೊಸ ಯೋಜನೆಯ ಭಾಗವಾಗಿ, ತಂತ್ರಜ್ಞಾನ ಆಧಾರಿತ, ಏ.ಸಿ ಸ್ಟೆಬಿಲೈಸರ್, ಸ್ಮಾರ್ಟ್‌ ಗೀಸರ್, ಸ್ಮಾರ್ಟ್ ಇನ್ವರ್ಟರ್‌ಗಳನ್ನು ತಯಾರಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT