ಕಿರುತೆರೆ ಮೂಲಕ ಜನಪ್ರಿಯತೆ ಗಳಿಸಿ ಹಿರಿತೆರೆಯಲ್ಲೂ ಮಿಂಚುತ್ತಿರುವ ಆರ್ಮಿ ಹ್ಯಾಮರ್ ಹೊಸದೊಂದು ಥ್ರಿಲ್ಲರ್ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಅನ್ನಪೂರ್ಣ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿರುವ ನೂತನ ಸಿನಿಮಾಕ್ಕೆ ಇವರು ಆಯ್ಕೆ ಆಗಿದ್ದಾರೆ. ಸಿನಿಮಾದ ಹೆಸರಿನ್ನೂ ಅಂತಿಮಗೊಂಡಿಲ್ಲ. ಬಾರ್‌ನಲ್ಲಿ ಕೆಲಸ ಮಾಡುವ ಯುವಕನ ಪಾತ್ರದಲ್ಲಿ ಇವರು ನಟಿಸಲಿದ್ದಾರೆ.

‘ಅಂಡರ್ ದ ಶ್ಯಾಡೊ’ ಸಿನಿಮಾ ನಿರ್ದೇಶಿಸಿದ್ದ ಬಾಬಕ್ ಅನ್ವರಿ ಈ ಸಿನಿಮಾಕ್ಕೆ ಕಥೆ ಹೊಸೆದಿದ್ದು, ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಈ ಸಿನಿಮಾ 2019ಕ್ಕೆ ಸಿನಿಮಾ ತೆರೆಗೆ ಬರಲಿದೆ.

ಈ ಮುದ್ದು ಮುಖದ ಚೆಲುವನಿಗೆ ಅವಕಾಶಗಳ ಮೇಲೆ ಅವಕಾಶ ದೊರಕುತ್ತಿರುವುದು ಖುಷಿ ತಂದಿದೆಯಂತೆ. 2006ರಲ್ಲಿ ಫ್ಲಿಕಾ ಸಿನಿಮಾದ ಮೂಲಕ ಹಿರಿತೆರೆ ಪ್ರವೇಶಿಸಿದ ಆರ್ಮಿ, ಸದ್ಯ ಹ್ಯಾಮರ್ ‘ಸಾರಿ ಟು ಬಾದರ್ ಯು’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇದರ ಹೊರತಾಗಿ ಇನ್ನೆರಡು ಚಿತ್ರಗಳು ಇವರ ಬತ್ತಳಿಕೆಯಲ್ಲಿವೆ. ‘ಕಾಲ್ ಮಿ ಬೈ ಯುವರ್ ನೇಮ್’ ಸಿನಿಮಾದ ಅವರ ನಟನೆಗೆ ಗೋಲ್ಡನ್ ಗ್ಲೋಬ್ ಉತ್ತಮ ಪೋಷಕ ನಟ ಪ್ರಶಸ್ತಿ ಗಳಿಸಿದ್ದರು. ಈ ಸಿನಿಮಾ ಆಸ್ಕರ್ ಅಂಗಳಕ್ಕೂ ಪ್ರವೇಶ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.