ಶನಿವಾರ, ಜೂನ್ 6, 2020
27 °C

ಶ್ವೇತಭವನದಲ್ಲಿ ರಾಜೀನಾಮೆ ಪರ್ವ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಶ್ವೇತಭವನದಲ್ಲಿ ರಾಜೀನಾಮೆ ಪರ್ವ

ವಾಷಿಂಗ್ಟನ್(ಎಎಫ್‌ಪಿ): ಹಗರಣಗಳು ಮತ್ತು ಅಧಿಕಾರಿಗಳ ರಾಜೀನಾಮೆಯಿಂದ ಸುದ್ದಿಯಲ್ಲಿರುವ  ಶ್ವೇತಭವನ, ಇದೀಗ ಮತ್ತೊಬ್ಬ ಅಧಿಕಾರಿ ಡೇವಿಡ್‌ ಸೊರೆನ್ಸೆನ್‌ ರಾಜೀನಾಮೆಯಿಂದ ಸದ್ದು ಮಾಡಿದೆ. ಒಂದೇ ವಾರದಲ್ಲಿ ಇಬ್ಬರು ಅಧಿಕಾರಿಗಳು ರಾಜೀನಾಮೆ ನೀಡಿರುವುದು ಚರ್ಚೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ರಾಜೀನಾಮೆ ನೀಡಿದ ಸಿಬ್ಬಂದಿ ಕಾರ್ಯದರ್ಶಿ ರೊಬ್‌ ಪೊರ್ಟ್‌ರ್‌ ವಿರುದ್ಧ ಟ್ರಂಪ್‌ ಮಾತನಾಡಿದ ಕೆಲವೇ ಗಂಟೆಗಳಲ್ಲಿ ಶ್ವೇತಭನವದ ಸ್ಪೀಚ್‌ ರೈಟರ್‌ (ಭಾಷಣ ಬರಹಗಾರ) ಸೊರೆನ್ಸನ್‌ ರಾಜೀನಾಮೆ ನೀಡಿದ್ದಾರೆ. ಪೋರ್ಟರ್‌ ವಿರುದ್ಧವೂ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದಂತೆ, ಶ್ವೇತಭವನದ ಸಿಬ್ಬಂದಿ ಡೇವಿಡ್ ಸೊರೆನ್ಸೆನ್‌ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಆದರೆ, ಈ ಆರೋಪಗಳನ್ನು ಅವರು ಅಲ್ಲಗಳೆದಿದ್ದಾರೆ.

’ಸೊರೆನ್ಸೆನ್‌ ನನ್ನ ಕಾಲಿನ  ಮೇಲೆ ಕಾರು ಹತ್ತಿಸಿದ್ದರು, ಸಿಗರೇಟಿನಿಂದ ನನ್ನ ಕೈ ಸುಟ್ಟಿದ್ದರು, ನನ್ನ ಕೂದಲು ಹಿಡಿದು ಎಳೆದಾಡಿ ಗೋಡೆಗೆ ಗುದ್ದಿದ್ದರು’ ಎಂದು ಸೊರೆನ್ಸೆನ್‌ ಅವರ ಮಾಜಿ ಪತ್ನಿ ಜೆಸ್ಸಿಕಾ ಕಾರ್ಬೆಟ್ ಅವರು ವಾಷಿಂಗ್ಟನ್‌ ಪೋಸ್ಟ್‌ಗೆ ತಿಳಿಸಿದ್ದಾರೆ.

ಈ ದೌರ್ಜನ್ಯ ನಡೆಸಿದಾಗ ಸೊರೆನ್ಸೆನ್‌ ಕಾನೂನು ಜಾರಿ ಇಲಾಖೆಯ ಅಧಿಕಾರಿಯಾಗಿದ್ದರಿಂದ ಆ ಸಂದರ್ಭದಲ್ಲಿ ಈ ಬಗ್ಗೆ ಏನೂ ಹೇಳಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.