ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡುಪು: ಬ್ರಹ್ಮವಾಹಕರಿಗೆ ಗೌರವಾರ್ಪಣೆ

Last Updated 20 ಫೆಬ್ರುವರಿ 2018, 5:29 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಳದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಸುಮಾರು 30 ಮಂದಿ ಬ್ರಹ್ಮ ವಾಹಕರಿಗೆ (ದೇವರು ಹೊರುವವರು) ಗೌರವ ಸನ್ಮಾನ ಸೋಮವಾರ ನಡೆಯಿತು.

ದೇವರು ಹೊರುವವರಾದ (ಬ್ರಹ್ಮವಾಹಕರು) ಕೃಷ್ಣ ಮೂರ್ತಿ ಭಟ್ ಮಂಗಳಾದೇವಿ, ಹರಿಪ್ರಸಾದ್ ಭಟ್ ಮಂಗಳಾದೇವಿ, ಕೃಷ್ಣಭಟ್ ಕದ್ರಿ, ಲಕ್ಷ್ಮೀ ನಾರಾಯಣ ಭಟ್ ಕುತ್ಯಾರು, ಮೋಹನ ಭಟ್ ಹೊಯಿಗೆಗುಡ್ಡೆ, ಲಕ್ಷ್ಮೀನಾರಾಯಣ ಭಟ್ ಹೊಯಿಗೆಗುಡ್ಡೆ, ಕೇಶವ ಭಟ್ ಹೊಯಿಗೆಗುಡ್ಡೆ, ಅಚ್ಯುತ ಭಟ್ ಪಾವಂಜೆ, ಬಾಲಕೃಷ್ಣ ತಂತ್ರಿ ಕಟೀಲು, ಗೋಪಾಲಕೃಷ್ಣ ಭಟ್ ಕುಂಬಳೆ, ಕೃಷ್ಣ ಭಟ್ ಬಿರ್ಲಾಯಿ ಪುತ್ತಿಗೆ, ಗೊಪಾಲ ಭಟ್ ಬಿರ್ಲಾಯಿ ಪುತ್ತಿಗೆ, ಹರಿನಾರಾಯಣ ಮಯ್ಯ, ಜಗನ್ನಾಥ ಭಟ್ ಹೊಯಿಗೆಗುಡ್ಡೆ, ಉಮೇಶ ಅಗ್ಗಿತ್ತಾಯ, ಕೃಷ್ಣ ಹೊಳ್ಳ ಬಾರೆ, ವಿಷ್ಣುಮೂರ್ತಿ ಕಾರಂತ ಕುಳಾಯಿ, ಮಾಧವ ಮಯ್ಯ ಪೊಳಲಿ, ಮಹಾದೇವ ಭಟ್ ಕೆರ್ವಾಶೆ, ನಾರಾಯಣ ಮಯ್ಯ ಅರಸಿಕಟ್ಟೆ, ಉದಯ ಕುಮಾರ್ ಕಲ್ಲುರಾಯ ಮಧೂರು, ರಾಜ ಐತಾಳ್ ಪೊಳಲಿ, ಸದಾಶಿವ ಭಟ್ ರೆಂಜಾಳ, ಧನಂಜಯ ಕೆಕ್ಕುಣ್ಣಾಯ, ಮಧೂರು, ಪ್ರದೀಪ್ ಪಣಂಬೂರು, ನರೇಶ ಕಾರಂತ ಕುಳಾಯಿ, ಸುಬ್ರಹ್ಮಣ್ಯ ಉಪರ್ಣ ಪದ್ಮುಂಜೆ, ಹರಿಪ್ರಸಾದ ಉಪಾಧ್ಯಾಯ ಶರವೂರು, ಲಕ್ಷ್ಮೀ ನಾರಾಯಣ ಭಟ್ ಪಚ್ಚನಾಡಿ ಅವರನ್ನು ಗೌರವಿಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ.ನರಸಿಂಹ ತಂತ್ರಿ, ಕಾರ್ಯಾಧ್ಯಕ್ಷ ಮೊಕ್ತೇಸರ ಭಾಸ್ಕರ ಕೆ., ಉಪಾಧ್ಯಕ್ಷ ಕೆ.ಮನೋಹರ ಭಟ್, ಪದ್ಮನಾಭ ಪೆದಮಲೆ, ಪಂಜ ಭಾಸ್ಕರ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಆಧ್ಯಕ್ಷ ಕೆ.ಸುದರ್ಶನ ಕುಡುಪು, ದೇವಳದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ ಉಪಸ್ಥಿತರಿದ್ದರು.

ಹಿರಿಯರಾದ ವಿದ್ವಾನ್ ಪಂಜ ಬಾಸ್ಕರ ಭಟ್ ಬ್ರಹ್ಮವಾಹಕ ಕೆಲಸದ ಕುರಿತು ಮಾತನಾಡಿದರು. ಕಾರ್ಯಾಧ್ಯಕ್ಷ ಕೆ.ಕೃಷ್ಣರಾಜ ತಂತ್ರಿ ಬ್ರಹ್ಮವಾಹಕರ ಪರಿಚಯ ಮಾಡಿದರು. ವಾಸುದೇವ ರಾವ್ ಕುಡುಪು ಕಾರ್ಯಕ್ರಮ ನಿರೂಪಿಸಿದರು.

ಹರಿದು ಬಂದ ಹೊರೆಕಾಣಿಕೆ: ಅನಂತಪದ್ಮನಾಭನ ಬ್ರಹ್ಮಕಲಶೋತ್ಸವಕ್ಕೆ ಭಾನುವಾರ ಹೊರೆಕಾಣಿಕೆ ಸಾಗರೋಪಾದಿಯಲ್ಲಿ ಹರಿದು ಬಂದಿದೆ. ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಮೆರವಣಿಗೆ ಉದ್ಘಾಟಿಸಿದರು. ದೇವಳಕ್ಕೆ ಅಗತ್ಯವಿರುವ ಪೂಜಾ ಪರಿಕರಗಳು, ಹರಕೆ ಸೇವೆಗಳು, ಅನ್ನದಾನಕ್ಕೆ ಉಪಯೋಗವಾಗುವ ಸ್ಟೀಲ್, ಅಲ್ಯುಮಿನಿಯಂ, ತಾಮ್ರ, ಹಿತ್ತಾಳೆ ಪಾತ್ರೆಗಳು, ಗ್ರೈಂಡರ್, ಕಪಾಟುಗಳು, ತೆಂಗಿನ ಕಾಯಿ ಸುಲಿಯುವ ಯಂತ್ರ, ಸೀಯಾಳ ಕೆತ್ತುವ ಮೆಷಿನು, ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ದವಸಧಾನ್ಯಗಳು, ತರಕಾರಿ, ಬಾಳೆಗೊನೆ, ಸೀಯಾಳ ಹಾಗೂ ಇತರ ಸಾಮಗ್ರಿಗಳನ್ನು ಸಮರ್ಪಣೆ ಮಾಡಿದರು. ಈ ಹೊರೆಕಾಣಿಕೆಯಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರು ಹೊರೆಕಾಣಿಕೆ ಸಮರ್ಪಿಸಿರುವುದು ಇನ್ನೊಂದು ವಿಶೇಷವಾಗಿತ್ತು.

ಹೊರೆಕಾಣಿಕೆ ದಿಬ್ಬಣದಲ್ಲಿ ಹೊರೆಕಾಣಿಕೆ ಸಮಿತಿ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ, ಅಚ್ಯುತ ಭಟ್ ಪಂಪ್‌ವೆಲ್, ಹೊರೆಕಾಣಿಕೆ ಸಮಿತಿ ಸಂಚಾಲಕರಾದ ಗಣೇಶ್ ಭಟ್ ಶರವು, ಸದಾನಂದ ಪೂಜಾರಿ ಮುಂಡಾಜೆ, ಮಟ್ಟಿ ಲಕ್ಷ್ಮೀನಾರಾಯಣ ರಾವ್, ದೇವಳದ ಮೊಕ್ತೇಸರ ಭಾಸ್ಕರ್ ಕೆ., ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಚಂದ್ರಹಾಸ ರೈ, ಹೊರೆಕಾಣಿಕೆ ಸಮಿತಿ ಸಂಯೋಜಕರಾದ ಉದಯ ಕುಮಾರ್ ಕುಡುಪು, ಪುಷ್ಪರಾಜ ಪೂಜಾರಿ, ಶರಣ್ ಪಂಪ್‌ವೆಲ್, ಸುದರ್ಶನ್ ಕೆ., ವಾಸುದೇವ ರಾವ್, ಮಹೇಶ್ ಮೂರ್ತಿ, ಪ್ರಭಾಕರ ಭಟ್, ರಾಘವೇಂದ್ರ, ಸದಾನಂದ ಪೂಜಾರಿ, ಕಿಶೋರ್ ಕೊಟ್ಟಾರಿ, ಹೊರೆಕಾಣಿಕೆ ಸಮಿತಿ ಸದಸ್ಯ ನೀಲಾಧರ್ ಶೆಟ್ಟಿ, ಮೋಹನ್ ಮೆಂಡನ್, ಉಮೇಶ್ ಶೆಟ್ಟಿ ವಾಮಂಜೂರು ಉಪಸ್ಥಿತರಿದ್ದರು.

ಇಂದು ಮಹಾ ಆಶ್ಲೇಷ ಬಲಿ
ಶ್ರೀ ಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಫೆ.20ರಂದು ಸಂಜೆ 6ಕ್ಕೆ ಮಹಾ ಆಶ್ಲೇಷ ಬಲಿ ನಡೆಯಲಿದೆ.
ಅಂದು ಬೆಳಿಗ್ಗೆ 5 ರಿಂದ ಪ್ರಾಯಶ್ಚಿತ ಹೋಮ, 7.30ರಿಂದ ನಾಗವನದಲ್ಲಿ ನಾಗದೇವರಿಗೆ ಕಲಶಾಭಿಷೇಕ, ಪ್ರಸನ್ನ ಪೂಜೆ, ಸರ್ಪ ಸೂಕ್ತ ಹೋಮ, ಮೃತ್ಯುಂಜಯ ಹೋಮ, ಬ್ರಹ್ಮಚಾರಿ ಆರಾಧನೆ, ಮಧ್ಯಾಹ್ನ 11 ಗಂಟೆಗೆ ಮಹಾಪೂಜೆ ನಡೆಯಲಿದೆ. ಸಂಜೆ 6ರಿಂದ ದೇವಾಲಯದ ಹೊರಾಂಗಣದಲ್ಲಿ ಏಕಕಾಲದಲ್ಲಿ 48 ಆಶ್ಲೇಷಾ ಬಲಿ ನಡೆಯಲಿದ್ದು ಬಳಿಕ 7ರಿಂದ ರಾತ್ರಿ ಪೂಜೆ, ನಿತ್ಯ ಬಲಿ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಧ್ಯಾಹ್ನ 2 ರಿಂದ 4.30ರವರೆಗೆ ಮಕ್ಕಳ ಯಕ್ಷಗಾನ ಬಳಿಕ ನೃತ್ಯ ಸಿಂಚನ, ಭಕ್ತಿ ಸಂಗೀತ, ಶಾಸ್ತ್ರೀಯ ವಾದ್ಯ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT