ಇತರರನ್ನು ದೂರುವುದೇ ಬಿಜೆಪಿಗರ ಮಂತ್ರ: ಸಿದ್ದರಾಮಯ್ಯ ಟೀಕೆ

7

ಇತರರನ್ನು ದೂರುವುದೇ ಬಿಜೆಪಿಗರ ಮಂತ್ರ: ಸಿದ್ದರಾಮಯ್ಯ ಟೀಕೆ

Published:
Updated:
ಇತರರನ್ನು ದೂರುವುದೇ ಬಿಜೆಪಿಗರ ಮಂತ್ರ: ಸಿದ್ದರಾಮಯ್ಯ ಟೀಕೆ

ಬೆಂಗಳೂರು: ಇತರರನ್ನು ದೂರುವುದೇ ಬಿಜೆಪಿಯವರ ಪ್ರಮುಖ ಮಂತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನು ಗುರಿಯಾಗಿಸಿ ಸಿದ್ದರಾಮಯ್ಯ ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಾರೆ. ಜತೆಗೆ ವ್ಯಂಗ್ಯಚಿತ್ರವೊಂದನ್ನೂ ಲಗತ್ತಿಸಿದ್ದಾರೆ. ಕಳ್ಳರು ಪರಾರಿಯಾಗುತ್ತಿರುವಾಗ ಪ್ರಧಾನಿ ಮೋದಿ ನಿದ್ರಿಸುತ್ತಿರುವ ವ್ಯಂಗ್ಯಚಿತ್ರ ಇದಾಗಿದೆ. ‘ತುರ್ತು ಸಂದರ್ಭದಲ್ಲಿ ನೆಹರು ಅವರನ್ನು ಟೀಕಿಸಿ’ ಎಂಬ ಬರಹದ ಫಲಕವನ್ನೂ ಮೋದಿ ಚಿತ್ರದ ಬಳಿ ಇರಿಸಲಾಗಿರುವ ವ್ಯಂಗ್ಯಚಿತ್ರ ಇದಾಗಿದೆ.

‘ನೀರವ್‌ ಮೋದಿ ಹಗರಣಕ್ಕೆ ಸಂಬಂಧಿಸಿ ಹಣಕಾಸು ಸಚಿವ ಅರುಣ್ ಜೇಟ್ಲಿ ಬ್ಯಾಂಕರ್‌ಗಳು ಮತ್ತು ಲೆಕ್ಕಪರಿಶೋಧಕರನ್ನು ದೂರುತ್ತಿದ್ದಾರೆ. ಬಿಎಸ್‌ವೈ ಅವರು ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಪ್ರಧಾನಿ ಮಾತ್ರ ಮೌನವಾಗಿದ್ದಾರೆ. ಬಹುಶಃ ಅವರು ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದ್ದಕ್ಕಾಗಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರನ್ನು ಟೀಕಿಸುವ ಬಗ್ಗೆ ಯೋಚಿಸುತ್ತಿರಬಹುದು’ ಎಂದು ಟ್ವೀಟರ್‌ನಲ್ಲಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry