ಶನಿವಾರ, ಜೂನ್ 6, 2020
27 °C
ಬಾಹುಬಲಿ ಮಹಾಮಸ್ತಕಾಭಿಷೇಕದ ವಿಶೇಷ ಆಕರ್ಷಣೆ

ವಿಂಧ್ಯಗಿರಿಯಲ್ಲಿ ಹೆಲಿಟೂರಿಸಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಂಧ್ಯಗಿರಿಯಲ್ಲಿ ಹೆಲಿಟೂರಿಸಂ

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕದ ವಿಶೇಷ ಆಕರ್ಷಣೆಯಾಗಿ ‘ಹೆಲಿಟೂರಿಸಂ’ಗೆ ಬುಧವಾರ ಚಾಲನೆ ದೊರೆಯಿತು. ಮೊದಲ ದಿನವೇ ಹಲವು ಮಂದಿ ಹೆಲಿಕಾಪ್ಟರ್‌ನಲ್ಲಿ ಕುಳಿತು ಅಭಿಷೇಕದ ಮನೋಹರ ದೃಶ್ಯಕ್ಕೆ ಪುಳಕಿತರಾದರು.

ಹುಬ್ಬಳ್ಳಿಯ ಬಾಹುಬಲಿ ಹೆಲಿಟೂರಿಸಂ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಒಬ್ಬರಿಗೆ ₹ 2,100 ದರ ಇದ್ದು, 10 ನಿಮಿಷ ಹಾರಾಡಬಹುದು.

ವಿಂಧ್ಯಗಿರಿಯ ನೋಟ, ಬಾಹುಬಲಿಯ ದರ್ಶನ, ಚಂದ್ರಗಿರಿಯ 14 ಪ್ರಾಚೀನ ಬಸದಿಗಳು, ಸಾಮ್ರಾಟ್‌ ಚಂದ್ರಗುಪ್ತ ಮೌರ್ಯ ಭದ್ರಬಾಹು ಗುಹೆಗಳು, 12 ಉಪನಗರಗಳನ್ನು ತೋರಿಸಲಾಗುತ್ತದೆ. ಶ್ರವಣಬೆಳಗೊಳದ ಸುತ್ತಲೂ ಇರುವ ಬಸದಿಗಳು, ಮಂದಿರ, ಮಸೀದಿಗಳು, ಜೋಡಿ ಬೆಟ್ಟದ ನಡುವೆ ಇರುವ ಚಿಕ್ಕದೇವರಾಜ ಒಡೆಯರ ಕಲ್ಯಾಣಿ, ಸುತ್ತಲಿನ ತೆಂಗಿನ ಮರಗಳ ನೈಸರ್ಗಿಕ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಅನಿವಾಸಿ ಭಾರತೀಯರ ಅಭಿಷೇಕ: ಅಮೆರಿಕ, ಇಂಗ್ಲೆಂಡ್‌, ಜರ್ಮನಿ, ಕೀನ್ಯಾ, ದುಬೈ, ಬ್ರೆಜಿಲ್‌, ಇಂಡೋನೇಷ್ಯಾ ಸೇರಿದಂತೆ ವಿವಿಧ ದೇಶಗಳಿಂದ ಬಂದಿದ್ದ 250ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಬುಧವಾರ ಬಾಹುಬಲಿಗೆ ರಜತ ಕಲಶದಲ್ಲಿ ಅಭಿಷೇಕ ನೆರವೇರಿಸಿದರು.

ಲಂಡನ್‌ನಲ್ಲಿ ವಾಸವಿರುವ ಸಂಕೀಘಟ್ಟದ ನವೀನ್‌ ಮತ್ತು ಕುಟುಂಬದವರು ಥೇಮ್ಸ್‌ ನದಿ ನೀರು ತಂದು ಅಭಿಷೇಕ ನೆರವೇರಿಸಿದ್ದು ವಿಶೇಷವಾಗಿತ್ತು.

ಅಮೆರಿಕದ ಪಿಯೂಷ್‌ ರಾಜಶ್ರೀ ಮತ್ತು ಪ್ರಧ್ಯುಮ್ನ ಅವರು ‘ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸುತ್ತಿದ್ದು ಖುಷಿ ತಂದಿದೆ’ ಎಂದರು.

ಫೆ. 22ರಂದು ಕೂಡ ಅನಿವಾಸಿ ಭಾರತೀಯರಿಗೆ ಅಭಿಷೇಕದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗಿದೆ ಎಂದು ಅನಿವಾಸಿ ಭಾರತೀಯರ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.