ಸೋಮವಾರ, ಮೇ 25, 2020
27 °C

ಕಾವೇರಿ ‘ಸುಪ್ರೀಂ’ ತೀರ್ಪು: ಸರ್ವಪಕ್ಷ ಸಭೆ ಕರೆದ ತಮಿಳುನಾಡು ಸರ್ಕಾರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಾವೇರಿ ‘ಸುಪ್ರೀಂ’ ತೀರ್ಪು: ಸರ್ವಪಕ್ಷ ಸಭೆ ಕರೆದ ತಮಿಳುನಾಡು ಸರ್ಕಾರ

ಚೆನ್ನೈ: ಸುಪ್ರೀಂ ಕೋರ್ಟ್ ಕರ್ನಾಟಕ ರಾಜ್ಯಕ್ಕೆ 14.75 ಸಾವಿರ ದಶಲಕ್ಷ ಘನ ಅಡಿಗಳಷ್ಟು (ಟಿ.ಎಂ.ಸಿ.ಅಡಿಗಳು) ಹೆಚ್ಚುವರಿ ಕಾವೇರಿ ನೀರನ್ನು ಹಂಚಿಕೆ ಮಾಡಿ, ತಮಿಳನಾಡಿಗೆ ನೀರನ್ನು ಕಡಿತಗೊಳಿಸಿರುವುದರಿಂದ ಮುಂದಿನ ನಡೆಯನ್ನು ಚರ್ಚಿಸಲು ತಮಿಳುನಾಡು ಸರ್ಕಾರ ಗುರುವಾರ ಸರ್ವ ಪಕ್ಷ ಸಭೆ ಕರೆದಿದೆ.

ಫೆ. 16ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು.

‘ಎಲ್ಲಾ ಪಕ್ಷಗಳ ಮುಖಂಡರ ಅಭಿಪ್ರಾಯಗಳನ್ನು ಪಡೆದು, ಸಮಾಲೋಚಿಸಿದ ಬಳಿಕ ಸರಕಾರ ಈ ವಿಷಯದ ಕುರಿತು ಮುಂದಿನ ನಡೆ ಅನುಸರಿಸಲಿದೆ’ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಐಎಡಿಎಂಕೆ ಹಾಗೂ ಡಿಎಂಕೆ ಸದಸ್ಯರು ಭಾಗವಹಿಸಿದ್ದಾರೆ.

* ಇವನ್ನೂ ಓದಿ...

* ಕಾವೇರಿ: ಸಮಾಧಾನ ತಂದ ‘ಸುಪ್ರೀಂ’ ತೀರ್ಪು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.