ಮಂಗಳವಾರ, ಡಿಸೆಂಬರ್ 10, 2019
20 °C
ರನ್ನ ಹಳಗನ್ನಡ ಪ್ರಶಸ್ತಿ; ನಾಳೆ ಮುಖ್ಯಮಂತ್ರಿ ಪ್ರದಾನ

ಷ.ಶೆಟ್ಟರ್, ಟಿ.ವಿ. ವೆಂಕಟಾಚಲ ಶಾಸ್ತ್ರಿ, ಹಂಪನಾಗೆ ಪ್ರಶಸ್ತಿ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷ.ಶೆಟ್ಟರ್, ಟಿ.ವಿ. ವೆಂಕಟಾಚಲ ಶಾಸ್ತ್ರಿ, ಹಂಪನಾಗೆ ಪ್ರಶಸ್ತಿ ಗರಿ

ಬಾಗಲಕೋಟೆ: ಮುಧೋಳದ ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನದಿಂದ ನೀಡುವ ‘ರನ್ನ ಹಳಗನ್ನಡ ಪ್ರಶಸ್ತಿ’ಗೆ ಸಂಶೋಧಕರಾದ ಡಾ.ಷ. ಶೆಟ್ಟರ್, ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಹಾಗೂ ಡಾ.ಹಂಪ ನಾಗರಾಜಯ್ಯ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯನ್ನು ಇತಿಹಾಸ, ಕನ್ನಡ ಹಾಗೂ ಜೈನ ಸಾಹಿತ್ಯದ ಸಂಶೋಧನೆ ಪ್ರಕಾರದಲ್ಲಿ ನೀಡಲಾಗಿದೆ. ಪ್ರಶಸ್ತಿ ಮೊತ್ತ ತಲಾ ₹1 ಲಕ್ಷ ಹಾಗೂ ಸ್ಮರಣಿಕೆ ಒಳಗೊಂಡಿದೆ.

ಫೆಬ್ರುವರಿ 25ರಂದು ಮುಧೋಳದ ರನ್ನ ಕ್ರೀಡಾಂಗಣದಲ್ಲಿ ನಡೆಯುವ ರನ್ನ ವೈಭವದ ಐದನೇ ಸಾಂಸ್ಕೃತಿಕ ಉತ್ಸವದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಇದೇ ವೇಳೆ ಕವಿ ರನ್ನನ ಕುರಿತು ಪ್ರತಿಷ್ಠಾನ ಹೊರತಂದಿರುವ ಐದು ಕೃತಿಗಳ ಲೋಕಾರ್ಪಣೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)