ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದ ಜತೆ ಸಹಕಾರ ಅತ್ಯುತ್ತಮ’

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಯೋತ್ಪಾದನೆ ಚಟುವಟಿಕೆ ನಿಗ್ರಹಿಸುವಲ್ಲಿ ಭಾರತ ಜತೆಗಿನ ದ್ವಿಪಕ್ಷೀಯ ಸಹಕಾರ ಭವಿಷ್ಯದಲ್ಲೂ ಅತ್ಯುತ್ತಮವಾಗಿರಲಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.

‘ಭಯೋತ್ಪಾದನೆ ನಿಗ್ರಹಿಸುವಲ್ಲಿ ಭಾರತ ಮಹತ್ವದ ರಾಷ್ಟ್ರವಾಗಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈಗಾಗಲೇ ಸರಣಿ ಸಭೆಗಳನ್ನು ನಡೆಸಿದ್ದಾರೆ. ಈ ಸಭೆಗಳ ಮುಂದುವರಿದ ಭಾಗವಾಗಿ ಉಭಯ ಸರ್ಕಾರಗಳು ಮಹತ್ವದ ರೂಪುರೇಷೆಗಳನ್ನು ರಚಿಸಿ ಸಹಭಾಗಿತ್ವವನ್ನು ಬಲಿಷ್ಠಗೊಳಿಸಿವೆ’ ಎಂದು ಅಮೆರಿಕದ ಭಯೋತ್ಪಾದನೆ ನಿಗ್ರಹ ಸಮನ್ವಯಾಧಿಕಾರಿ ನಾಥನ್‌ ಸೇಲ್ಸ್‌ ತಿಳಿಸಿದ್ದಾರೆ.

’ಕಳೆದ ವರ್ಷ ಅಮೆರಿಕಕ್ಕೆ ಮೋದಿ ಅವರು ಭೇಟಿ ನೀಡಿದಾಗ ಭಯೋತ್ಪಾದನೆ ಸಂಘಟನೆಗಳ ವಿರುದ್ಧದ ಕಾರ್ಯಾಚರಣೆಯನ್ನು ಬಲಪಡಿಸುವ ಬಗ್ಗೆ ಚರ್ಚಿಸಲಾಗಿತ್ತು. ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆ ಮುಖ್ಯಸ್ಥ ಸಯ್ಯದ್‌ ಸಲಾಹುದ್ದೀನ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಅಮೆರಿಕ ಘೋಷಿಸಿತ್ತು’ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT