ಜಾಲಿ ರೈಡ್‌ಗೆ ಹೋದ ಪ್ರಿಯಕರನ ಕೊಂದು, ಪ್ರಿಯತಮೆ ಮೇಲೆ ಅತ್ಯಾಚಾರ ಎಸಗಿದ ಅಪರಿಚಿತ ಗುಂಪು

ಶುಕ್ರವಾರ, ಮಾರ್ಚ್ 22, 2019
24 °C

ಜಾಲಿ ರೈಡ್‌ಗೆ ಹೋದ ಪ್ರಿಯಕರನ ಕೊಂದು, ಪ್ರಿಯತಮೆ ಮೇಲೆ ಅತ್ಯಾಚಾರ ಎಸಗಿದ ಅಪರಿಚಿತ ಗುಂಪು

Published:
Updated:
ಜಾಲಿ ರೈಡ್‌ಗೆ ಹೋದ ಪ್ರಿಯಕರನ ಕೊಂದು, ಪ್ರಿಯತಮೆ ಮೇಲೆ ಅತ್ಯಾಚಾರ ಎಸಗಿದ ಅಪರಿಚಿತ ಗುಂಪು

ಮುಂಬೈ: ಅಪರಿಚಿತ ಗುಂಪೊಂದು ಜಾಲಿ ರೈಡ್‌ಗೆ ಹೋದ ಯುವಕನನ್ನು ಗುಂಡಿಕ್ಕಿ ಹತ್ಯೆಗೈದಿದ್ದು,  ಆತನ ಪ್ರಿಯತಮೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಘಟನೆ ಅಂಬರ್‌ನಾಥ್–ತಿತ್ವಾಲ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಈ ವೇಳೆ ಯುವಕನ ಬಳಿಯಿದ್ದ ಮೊಬೈಲ್ ಹಾಗೂ ದ್ವಿ–ಚಕ್ರವಾಹನವನ್ನು ಕಳವು ಮಾಡಿದ್ದು, ತಿತ್ವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಿಯತಮ ಬೈಕಿನಲ್ಲಿ ಲಾಂಗ್‌ರೈಡ್ ಹೋಗುವ ಸಲುವಾಗಿ ತನ್ನ ಪ್ರಿಯತಮೆಯನ್ನು ಅಂಬರ್‌ನಾಥ್‌ನಿಂದ ಕರೆದುಕೊಂಡು ಹೊರಟ್ಟಿದ್ದನು. ಇವರಿಬ್ಬರು ಒಂದು ವರ್ಷದಿಂದ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಪ್ರಿಯಕರ ಅಂಬರ್‌ನಾಥ್–ತಿತ್ವಾಲ ರಸ್ತೆಯ ಬಳಿ ಮೂತ್ರ ವಿಸರ್ಜನೆಗೆಂದು ಹೋಗಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ಗುಂಪೊಂದು ಬೈಕ್ ಬಳಿ ಕಾಯುತ್ತಿದ್ದ ಯುವತಿಯ ಕೈ ಹಿಡಿದು ಎಳೆದಾಡಿ ಅತ್ಯಾಚಾರ ಎಸಗಿದ್ದಾರೆ. ಯುವತಿಯ ಚೀರಾಟ ಕೇಳಿ ಬಂದ ಪ್ರಿಯಕರ ಯುವತಿಯನ್ನು ಬಿಡಲು ಮನವಿ ಮಾಡಿದ್ದಾನೆ. ಆಗ ಆ ಗುಂಪು ಮೌಲ್ಯಭರಿತ ವಸ್ತುಗಳು ಹಾಗೂ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಆತನ ಮೇಲೆ ಮೂರರಿಂದ ನಾಲ್ಕು ಬಾರಿ ಗುಂಡು ಹಾರಿಸಿ ಎಲ್ಲಾ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ತಿತ್ವಾಲ ಪೊಲೀಸ್ ಠಾಣಾ ಅಧಿಕಾರಿ ಹೇಳಿದ್ದಾರೆ.

ನಂತರ ಯುವತಿಯ ಬೇರೊಬ್ಬ ಪ್ರಯಾಣಿಕರ ಸಹಾಯದಿಂದ ತಿತ್ವಾಲ ಪೊಲೀಸ್ ಠಾಣೆಗೆ ಬಂದು ಘಟನೆ ಬಗ್ಗೆ ವಿವರಿಸಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆತ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.

ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ದುಷ್ಕರ್ಮಿಗಳ ಸೆರೆಗೆ ಬಲೆ ಬೀಸಿರುವ ಥಾಣೆ ಪೊಲೀಸರು ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ವಿಶೇಷ ತಂಡ ರಚಿಸಿದ್ದಾರೆ.

A 26-year-old man was shot dead and his girlfriend was allegedly raped by a robber, who fled with their mobile phones and a two-wheeler. The incident took place at Ambernath-Titwala Road on Monday night. A case has been filed by the Titwala police under section 302 (murder) of the IPC and the Arms Act, 1959. The deceased, a resident of Shahpur, worked as a chef at a Chinese stall.

As per their plan to go on a long ride, the man picked up his girlfriend from Ambernath. The couple had been dating for the past one year. While heading towards their destination, man stopped his bike near a hillock to answer the call of nature.

“While the man entered the bush, his girlfriend waited near the bike. It was here that a man caught her hand. He came running to his girlfriend’s rescue and asked the man to leave her. But the accused threatened to shoot him if they did not give him their valuables and money,” said an officer from Titwala police station.

The officer added the area where the couple had halted is isolated, which becomes a picnic spot for the locals on weekends.

“The accused got angry when the man refused to give into his demands and fired at him three to four times. After the man collapsed, the accused raped his girlfriend. He then took their valuables, mobile phones, cash and bike before fleeing the spot,” the officer said.

The woman took help of passer-by, who dropped her at the Titwala police station. The officers rushed to the spot and took the man to a hospital, where he was declared dead on arrival. Based on the woman’s statement, the police field a case. The Thane crime branch and local police stations have formed a team to arrest the accused.

Cops said since the area is isolated, it lacks CCTV coverage. They are now questioning locals and passers-by for leads.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry