ಭಾನುವಾರ, ಮಾರ್ಚ್ 26, 2023
31 °C

ಅನಂತಕುಮಾರ ಹೆಗಡೆ ವಿರುದ್ಧ ಪ್ರತಿಭಟನೆ: ದಲಿತ ಮುಖಂಡರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಂತಕುಮಾರ ಹೆಗಡೆ ವಿರುದ್ಧ ಪ್ರತಿಭಟನೆ: ದಲಿತ ಮುಖಂಡರ ಬಂಧನ

ಹುಬ್ಬಳ್ಳಿ: ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ದಲಿತ‌ ಸಂಘಟನೆಗಳ‌‌ ಪ್ರಮುಖರನ್ನು ಇಲ್ಲಿ ಬಂಧಿಸಲಾಯಿತು.

ಪಿತಾಂಬ್ರಪ್ಪ ಬಿಳಾರ, ಪ್ರೇಮನಾಥ ಚಿಕ್ಕತುಂಬಳ, ವಿಜಯ ‌ಗುಂಟ್ರಾಳ, ಗುರುನಾಥ ಉಳ್ಳಿಕಾಶಿ, ಪರಶುರಾಮ ಕಾಳೆ ಅವರನ್ನು ಬಂಧಿಸಿ‌ ಕರೆದೊಯ್ಯಲಾಯಿತು.

ಸಚಿವ ಅನಂತಕುಮಾರ್ ಹೆಗಡೆ  ಸಂವಿಧಾನ ವಿರೋಧಿ ಹೇಳಿಕೆ‌ ನೀಡಿದ್ದಾರೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಸಚಿವರು ‌ವಿದ್ಯಾನಗರದ‌ ದೈವಜ್ಞ ಭವನಕ್ಕೆ ಕಾರ್ಯಕ್ರಮ ‌ನಿಮಿತ್ತ ಭೇಟಿ‌ ನೀಡುವ ಹಿನ್ನಲೆಯಲ್ಲಿ ಈ ಪ್ರತಿಭಟನೆ ಜರುಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.