ಅಮಿತ್ ಶಾ ಕಾರ್ಯಕ್ರಮ ಏ.12ಕ್ಕೆ ಮುಂದೂಡಿಕೆ

ಭಾನುವಾರ, ಮಾರ್ಚ್ 24, 2019
34 °C

ಅಮಿತ್ ಶಾ ಕಾರ್ಯಕ್ರಮ ಏ.12ಕ್ಕೆ ಮುಂದೂಡಿಕೆ

Published:
Updated:
ಅಮಿತ್ ಶಾ ಕಾರ್ಯಕ್ರಮ ಏ.12ಕ್ಕೆ ಮುಂದೂಡಿಕೆ

ಬೆಳಗಾವಿ: ಸೋಮವಾರ, ಮಂಗಳವಾರ ನಿಗದಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಕಾರ್ಯಕ್ರಮ ರದ್ದಾಗಿದ್ದು, ಏ.12, 13ಕ್ಕೆ ಮುಂದೂಡಲಾಗಿದೆ ಎಂದು ಪಕ್ಷದ ವಿಭಾಗೀಯ ಉಸ್ತುವಾರಿ ಈರಣ್ಣ ಕಡಾಡಿ ತಿಳಿಸಿದರು.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮಿತ್ ಶಾ ಅವರು ರಾಜ್ಯಸಭೆ ಕಲಾಪದಲ್ಲಿ ಪಾಲ್ಗೊಳ್ಳಬೇಕಿರುವುದರಿಂದ ಕಾರ್ಯಕ್ರಮ ಮುಂದೂಡಲಾಗಿದೆ’ ಎಂದರು.

ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಏ.3ರಂದು ಸಂಜೆ ಆಯೋಜಿಸಲಾಗಿರುವ ಹಿಂದುಳಿದ ವರ್ಗಗಳ ಸಮಾವೇಶ ನಿಗದಿಯಂತೆ ನಡೆಯಲಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ಶಾ ಅವರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಇದನ್ನೂ ಓದಿ... 

ಏಪ್ರಿಲ್‌ 2ಕ್ಕೆ ನಂದಗಡಕ್ಕೆ ಶಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry