ಭಾರತ ವಿಶ್ವಕಪ್‌ ಗೆದ್ದು ಇಂದಿಗೆ ಏಳು ವರ್ಷ: ಟ್ವಿಟರ್‌ನಲ್ಲಿ ಪ್ರಶಂಸೆ

ಮಂಗಳವಾರ, ಮಾರ್ಚ್ 19, 2019
26 °C

ಭಾರತ ವಿಶ್ವಕಪ್‌ ಗೆದ್ದು ಇಂದಿಗೆ ಏಳು ವರ್ಷ: ಟ್ವಿಟರ್‌ನಲ್ಲಿ ಪ್ರಶಂಸೆ

Published:
Updated:
ಭಾರತ ವಿಶ್ವಕಪ್‌ ಗೆದ್ದು ಇಂದಿಗೆ ಏಳು ವರ್ಷ: ಟ್ವಿಟರ್‌ನಲ್ಲಿ ಪ್ರಶಂಸೆ

ಬೆಂಗಳೂರು: ಭಾರತ ಕ್ರಿಕೆಟ್‌  ತಂಡ ವಿಶ್ವಕಪ್‌ ಗೆದ್ದು ಇಂದಿಗೆ ಏಳು ವರ್ಷ ಕಳೆದಿದೆ. ಆ ದಿನದ ರೋಮಾಂಚಕ ಕ್ಷಣಗಳನ್ನು ಕ್ರೀಡಾಭಿಮಾನಿಗಳು ಟ್ವಿಟರ್‌ನಲ್ಲಿ ಮೆಲುಕು ಹಾಕಿದ್ದಾರೆ.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ), ಕ್ರಿಕೆಟಿಗ ಸುರೇಶ್‌ ರೈನಾ, ವಿರೇಂದ್ರ ಸೆಹ್ವಾಗ್‌ ಟ್ವೀಟ್‌ ಮಾಡಿ ಸಂತಸ ವ್ಯಕ್ತ ಪಡಿಸಿದ್ದಾರೆ. 

2011ರ ಏ. 2ರಂದು ಭಾರತ –ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಆರು ವಿಕೆಟ್‌ ಜಯ ಸಾಧಿಸಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 6 ಕಳೆದುಕೊಂಡು 274 ರನ್ ಗಳಿಸಿತ್ತು. 275 ರನ್‌ ಗುರಿ ಬೆನ್ನತ್ತಿದ ಭಾರತ ಗೌತಮ್‌ ಗಂಭೀರ್‌ ಹಾಗೂ ನಾಯಕ ಎಂ.ಎಸ್‌. ದೋನಿ ಅವರು ಅಮೋಘ ಬ್ಯಾಟಿಂಗ್‌ ನೆರವಿನಿಂದ 10 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತ್ತು.

28 ವರ್ಷಗಳ ನಂತರ ವಿಶ್ವಕಪ್ ವಿಜಯ
1983ರಲ್ಲಿ ಕಪಿಲ್‌ದೇವ್ ಬಳಗವು ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ  ನಂತರ ಭಾರತಕ್ಕೆ ಮತ್ತೆ ಜಯಿಸಲು ಸಾಧ್ಯವಾಗಿದ್ದು ದೋನಿ ನಾಯಕತ್ವದಲ್ಲಿ.

2011ರ ವಿಶ್ವಕಪ್ ಟೂರ್ನಿಯ ಉದ್ದಕ್ಕೂ ದೋನಿಯ ನಾಯಕತ್ವ ಮತ್ತು ಫೈನಲ್‌ ಪಂದ್ಯದಲ್ಲಿ ಅವರ ಬ್ಯಾಟಿಂಗ್ (ಅಜೇಯ 91) ಅಭಿಮಾನಿಗಳ ಎದೆಯಂಗಳದಲ್ಲಿ ಅಚ್ಚಳಿಯದೇ ಉಳಿಯಿತು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತವು ವಿಶ್ವಕಪ್ ಗೆದ್ದು ಸಂಭ್ರಮಿಸಿತು.

*

*

*

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry