ಹಂಪಿ ವಿ.ವಿ: ನೇಮಕಾತಿ ಆದೇಶ ವಾಪಸ್‌

ಭಾನುವಾರ, ಮಾರ್ಚ್ 24, 2019
32 °C

ಹಂಪಿ ವಿ.ವಿ: ನೇಮಕಾತಿ ಆದೇಶ ವಾಪಸ್‌

Published:
Updated:
ಹಂಪಿ ವಿ.ವಿ: ನೇಮಕಾತಿ ಆದೇಶ ವಾಪಸ್‌

ಹೊಸಪೇಟೆ: ಒಂಬತ್ತು ಬೋಧಕ ಮತ್ತು ಆರು ಬೋಧಕೇತರ ಸಿಬ್ಬಂದಿ ನೇಮಕಾತಿ ಸಂಬಂಧ ಹೊರಡಿಸಿದ್ದ ಆದೇಶವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಹಿಂದಕ್ಕೆ ಪಡೆದಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ಮಾ.27ರಂದೇ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆ ಸೇರಿ ಈ ನೇಮಕಾತಿಗೆ ಒಪ್ಪಿಗೆ ಕೊಟ್ಟಿತ್ತು. ಬಳಿಕ ಅದೇ ದಿನ ನೇಮಕಾತಿ ಆದೇಶ ಪತ್ರ ಕೂಡ ಕೊಟ್ಟಿತ್ತು. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ನೇಮಕಾತಿ ಪತ್ರ ನೀಡಲಾಗಿದೆ ಎಂದು ಆರೋಪಿಸಿ ಕೆಲವರು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಅವರಿಗೆ ದೂರು ಕೊಟ್ಟಿದ್ದರು.

ಜಿಲ್ಲಾಧಿಕಾರಿ ಅವರ ಸೂಚನೆಯ ಮೇರೆಗೆ ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ಅವರು ಮಂಗಳವಾರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry