ಶನಿವಾರ, ಆಗಸ್ಟ್ 8, 2020
22 °C

ಶ್ರೀಲಂಕಾ: ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಲಂಕಾ: ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ಕೊಲಂಬೊ: ಶ್ರೀಲಂಕಾ ಪ್ರಧಾನಿರನಿಲ್‌ ವಿಕ್ರಂ ಸಿಂಘೆ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ.

ಸಭಾಪತಿ ಕರು ಜಯಸೂರ್ಯ ಅವರಿಗೆ ಅವಿಶ್ವಾಸ ನಿರ್ಣಯ ಸಲ್ಲಿಸಿದ್ದು, ಬುಧವಾರ ಸಂಸತ್ತಿನಲ್ಲಿ ಇದು ಚರ್ಚೆಯಾಯಿತು.

‘ವಿಕ್ರಂಸಿಂಘೆ ಅವರು ಆರ್ಥಿಕ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿಲ್ಲ. ಕಳೆದ ತಿಂಗಳು ಕೇಂದ್ರ ಕ್ಯಾಂಡಿ ಜಿಲ್ಲೆಯಲ್ಲಿ ನಡೆದ ಮುಸ್ಲಿಂ ವಿರೋಧಿ ದಂಗೆ ಹತ್ತಿಕ್ಕಲು ವಿಫಲರಾಗಿದ್ದಾರೆ’ ಎಂದು ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿದೆ.

‘2015ರಲ್ಲಿ ಅಂಗೀಕರಿಸಿದ ನಿರ್ಣಯಗಳ ವಿರುದ್ಧವಾಗಿ ನಡೆಯುತ್ತಿರುವ ಸರ್ಕಾರವನ್ನು ಕೆಳಗಿಳಿಸುವ ಯೋಜನೆಯ ಮೊದಲ ಹೆಜ್ಜೆ ಇದು’ ಎಂದು ತಮಿಳ್ ನ್ಯಾಷನಲ್ ಅಲಯನ್ಸ್‌ನ ಮುಖಂಡ ಆರ್.ಸಂಪಂಥನ್ ಅವರು ಸಂಸತ್ತಿಗೆ ತಿಳಿಸಿದ್ದಾರೆ.

225 ಸಂಸತ್ ಸದಸ್ಯರಿದ್ದು, ಅವಿಶ್ವಾಸ ನಿರ್ಣಯದಿಂದ ‍ಪಾರಾಗಲು ವಿಕ್ರಮಸಿಂಘೆ ಅವರಿಗೆ 113 ಮತಗಳ ಅಗತ್ಯವಿದೆ. ಸಂವಿಧಾನದ ಪ್ರಕಾರ 2020ಕ್ಕೂ ಮುನ್ನ ಈಗಿರುವ ಸರ್ಕಾರ ವಿಸರ್ಜಿಸಲು ಸಾಧ್ಯವಿಲ್ಲ. ಒಟ್ಟು ಸದಸ್ಯ ಬಲದ ಮೂರನೇ ಎರಡು ಭಾಗದಷ್ಟು ಮತಗಳು ಅವಿಶ್ವಾಸ ನಿರ್ಣಯದ ಪರವಿದ್ದರೆ ಮಾತ್ರ ಕ್ಷಿಪ್ರ ಚುನಾವಣೆಗೆ ಕರೆ ನೀಡಬಹುದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.