ಬೆಂಗಳೂರು: ಮೊಬೈಲ್ ಆ್ಯಪ್ ಆಧಾರಿತ ಬಾಡಿಗೆ ಟ್ಯಾಕ್ಸಿ ಸೇವೆ ಒದಗಿಸುವ ಓಲಾ ಸಂಸ್ಥೆಯು ಪ್ರಯಾಣಿಕರಿಗೆ ವಿಮೆ ಕೊಡುಗೆ ಪ್ರಕಟಿಸಿದೆ.

ನಗರದೊಳಗೆ ಓಲಾ ಸೇವೆ ಬಳಸುವ ಪ್ರಯಾಣಿಕರು ಈ ವಿಮೆಯ ಪ್ರಯೋಜನ ಪಡೆದುಕೊಳ್ಳಬಹುದು. ಓಲಾ ಕ್ಯಾಬ್, ಆಟೊ, ಇ–ರಿಕ್ಷಾ ಸೇವೆಗಳಲ್ಲೂ ಈ ವಿಮೆ ಅನ್ವಯವಾಗಲಿದೆ.

ಅಕೊ (Acko) ಜನರಲ್ ಇನ್ಶುರನ್ಸ್ ಮತ್ತು ಐಸಿಐಸಿಐ ಲೋಂಬಾರ್ಡ್ ಜನರಲ್ ಇನ್ಶುರನ್ಸ್ ಸಹಭಾಗಿತ್ವದೊಂದಿಗೆ ದೇಶದ 110ಕ್ಕೂ ಅಧಿಕ ನಗರಗಳಲ್ಲಿ ಸೇವೆಗೆ ಚಾಲನೆ ನೀಡಲಿದೆ. ನಗರದ ಒಳಗೆ ಪ್ರತಿಬಾರಿ ಪ್ರಯಾಣ ಮಾಡುವಾಗ ₹ 1 ಪಾವತಿಸಿ ಈ ಸೌಲಭ್ಯ ಪಡೆದುಕೊಳ್ಳಬಹುದು. ಓಲಾ ಬಾಡಿಗೆ ಕಾರ್ನಲ್ಲಿ ಪ್ರಯಾಣಿಸಲು ₹ 10 ಮತ್ತು ದೂರದ ಪಯಣಕ್ಕೆ ₹ 15 ಪಾವತಿಸಬೇಕು.

ಪ್ರಯೋಜನವೇನು?: ಓಲಾ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವಾಗ ಲಗೇಜ್ ಅಥವಾ ಲ್ಯಾಪ್ಟಾಪ್ ಕಳೆದುಕೊಂಡರೆ, ವಿಮಾನ ತಪ್ಪಿಸಿ
ಕೊಂಡರೆ, ಅಪಘಾತದ ವೈದ್ಯಕೀಯ ವೆಚ್ಚ, ಆಂಬುಲೆನ್ಸ್ ವೆಚ್ಚ ಇತ್ಯಾದಿ ಈ ವಿಮೆ ಒಳಗೊಳ್ಳಲಿದೆ.

ಓಲಾ ಆ್ಯಪ್,ವಿಮೆ ಪೂರೈಸುವ ಸಂಸ್ಥೆಗಳ ಜಾಲತಾಣ ಮತ್ತು ಕಾಲ್ ಸೆಂಟರ್ಗಳ ಮೂಲಕ ವಿಮೆ ಮೊತ್ತ ಪಡೆಯಬಹುದಾಗಿದೆ ಎಂದು ಓಲಾ ಸಿಒಒ ವಿಶಾಲ್ ಕೌಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.