ಕಾಲುವೆಗೆ ಟ್ರ್ಯಾಕ್ಟರ್‌ ಉರುಳಿ 9 ಮಹಿಳೆಯರ ಸಾವು

ಗುರುವಾರ , ಮಾರ್ಚ್ 21, 2019
30 °C

ಕಾಲುವೆಗೆ ಟ್ರ್ಯಾಕ್ಟರ್‌ ಉರುಳಿ 9 ಮಹಿಳೆಯರ ಸಾವು

Published:
Updated:
ಕಾಲುವೆಗೆ ಟ್ರ್ಯಾಕ್ಟರ್‌ ಉರುಳಿ 9 ಮಹಿಳೆಯರ ಸಾವು

ಹೈದರಾಬಾದ್‌: ತೆಲಂಗಾಣದ ನಲಗೊಂಡ ಜಿಲ್ಲೆಯ ವಡ್ಡಿಪಟ್ಲಾ ಗ್ರಾಮದಲ್ಲಿ ಟ್ರ್ಯಾಕ್ಟರೊಂದು ಕಾಲುವೆಗೆ ಉರುಳಿ 9 ಮಂದಿ ಮಹಿಳೆಯರು ಮೃತಪಟ್ಟಿದ್ದಾರೆ.

‘30 ಮಂದಿ ಕೃಷಿ ಕಾರ್ಮಿಕರು ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ  ಕಾಲುವೆಗೆ ಮಗುಚಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಚಾಲಕ ಮೊಬೈಲ್‌ನಲ್ಲಿ ಮಾತನಾಡಿದ ಪರಿಣಾಮ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry