ಸೋಮವಾರ, ಜೂಲೈ 13, 2020
23 °C

‘ಏರೋನಾಟಿಕ್ ಎಂಜಿನಿಯರಿಂಗ್ ನನಗಿಷ್ಟ!’

ಅನ್ನಪೂರ್ಣ ಮೂರ್ತಿ Updated:

ಅಕ್ಷರ ಗಾತ್ರ : | |

‘ಏರೋನಾಟಿಕ್ ಎಂಜಿನಿಯರಿಂಗ್ ನನಗಿಷ್ಟ!’

1. ನಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ. ನನಗೆ ಏರೋನಾಟಿಕ್ ಎಂಜಿನಿಯರಿಂಗ್ ಓದಲು ಇಷ್ಟ. ಕೆಲವರು ನನಗೆ ಏರೋನಾಟಿಕ್ಸ್ ಡಿಪ್ಲೊಮಾ ಮಾಡಲು ಸಲಹೆ ನೀಡುತ್ತಿದ್ದಾರೆ. ನಾನು ಮುಂದೆ ಯಾವ ಕೋರ್ಸ್ ಮಾಡಲಿ?

–ಹೆಸರು, ಊರು ಬೇಡ

ಉತ್ತರ: ವಿದ್ಯಾರ್ಥಿಗಳು ಪದವೀಧರರಾಗಬೇಕು. ಬಹಳ ವಿದ್ಯಾರ್ಥಿಗಳು, ಮನೆಯಲ್ಲಿ ಹಣದ ಒತ್ತಡವಿದ್ದರೆ ಡಿಪ್ಲೊಮಾ ಮಾಡಿ ಕೆಲಸಕ್ಕೆ ಸೇರುತ್ತಾರೆ. ಇನ್ನು ಕೆಲವರು ಪ್ರೊಫೆಷನಲ್‌ ಕೋರ್ಸ್‌ಗೆ ಸೀಟು ಸಿಗದಿರುವ ಅನುಮಾನದಿಂದ ಡಿಪ್ಲೊಮಾಗೆ ಸೇರುತ್ತಾರೆ. ನನ್ನ ಪ್ರಕಾರ ನೀವು ಡಿಗ್ರಿಗೆ ಸೇರುವ ಗುರಿಯನ್ನು ಇಟ್ಟುಕೊಳ್ಳಿ. ಪಿ.ಯು.ಸಿ.ಯಲ್ಲಿ ಸೈನ್ಸ್‌ ತೆಗೆದುಕೊಂಡು, ಪಿಸಿಎಂ ಕಾಂಬಿನೇಷನ್‌ ತೆಗೆದುಕೊಳ್ಳಬೇಕು.

ಉತ್ತಮ ತಯಾರಿ ನಡೆಸಿ ಕಷ್ಟಪಟ್ಟು ಓದಿದರೆ, ಆಲ್‌ ಇಂಡಿಯಾ ಎಂಟ್ರೆನ್ಸ್‌ ಪರೀಕ್ಷೆಯನ್ನು ಬರೆಯಬೇಕು. JEE (main), JEE (advanced) ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಉತ್ತಮವಾದ ಕಾಲೇಜುಗಳಲ್ಲಿ ಸೀಟು ಸಿಗುತ್ತದೆ. 

2. ನಾನು ಎಂಬಿಬಿಎಸ್ ದ್ವಿತೀಯ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ನ್ಯೂರಾಲಜಿ ವಿಷಯದಲ್ಲಿ ಆಸಕ್ತಿಯಿದೆ. ನನಗೆ ಇದರ ಬಗ್ಗೆ ನಡೆಯುವ ಪಿಜಿ ಪ್ರವೇಶ ಪರೀಕ್ಷೆಗಳ ಕುರಿತು ತಿಳಿಸಿ. ಕೋರ್ಸ್‌ನ ಅವಧಿ, ವೆಚ್ಚದ ಬಗ್ಗೆ ಮಾಹಿತಿ ನೀಡಿ. ಎಂಬಿಬಿಎಸ್ ನಂತರ ನಿಮ್ಹಾನ್ಸ್‌ನಲ್ಲಿ ನ್ಯೂರಾಲಜಿ ಮಾಡಲು ಸಾಧ್ಯವೇ?

–ವಿಜಯಲಕ್ಷ್ಮಿ , ದೇವನಹಳ್ಳಿ

ಉತ್ತರ: ನೀವು 2ನೇ ವರ್ಷ ಎಂಬಿಬಿಎಸ್‌ನಲ್ಲೇ ಮುಂದೆ ಏನಾಗಬೇಕು ಅಂತ ಮುಂದಾಲೋಚನೆ ಇಟ್ಟುಕೊಂಡಿರುವುದನ್ನು ಮೆಚ್ಚಲೇಬೇಕು.

ಡಾಕ್ಟರ್‌ಗಳು ನ್ಯೂರಾಲಜಿಯಲ್ಲಿ ವ್ಯಾಸಂಗ ಮಾಡಿದವರನ್ನು ‘ನ್ಯೂರಾಲಜಿಸ್ಟ್‌’ ಎಂದು ಕರೆಯುತ್ತಾರೆ. ಡಾಕ್ಟರ್‌ಗಳು ನರಗಳಿಗೆ ಸಂಬಂಧಿಸಿದ ರೋಗಗಳನ್ನು ‘ಸರ್ಜರಿ’ಯ ಮೂಲಕ ಸರಿಪಡಿಸುವವರನ್ನು ‘ನ್ಯುರೋಸರ್ಜನ್‌’ ಅಂತ ಕರೀತಾರೆ.

ಒಟ್ಟಿನಲ್ಲಿ ನ್ಯೂರಾಲಜಿಸ್ಟ್‌ಗಳು ನರಗಳ ಕಾಯಿಲೆಯನ್ನು ವಾಸಿ ಮಾಡುವ ತಜ್ಞರು. ಇವರು ಮೆದುಳಿನ ಟ್ರೋಮ್‌, ಎಪಿಲೆಪ್ಸಿ, ಸ್ಟ್ರೋಕ್‌ಗಳು, ಮಲ್ಟಿಪಲ್‌ ಸ್ಕೆಲೋಸಿಸ್, ಪಾರ್ಕಿನ್‌ಸನ್ಸ್‌, ಆಲ್‌ಸೈಮರ್ಸ್‌ – ಇಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡುವವರು. ನೀವು ಎಂಬಿಬಿಎಸ್‌ ಮುಗಿಸಿ, ನಂತರ MD/MS/DNB ಇನ್‌ ಜನರಲ್‌ ಮೆಡಿಸನ್‌ ಮುಗಿಸಬೇಕು. ನಂತರ ಪಿಜಿ ಇನ್‌ ನ್ಯೂರಾಲಜಿ ಕೋರ್ಸ್‌ಗೆ ಸೇರಬೇಕು.

ಎಂಬಿಬಿಎಸ್‌–5–1/2 ವರ್ಷದ ಕೋರ್ಸ್‌

ಎಂಡಿ/ಡಿಎನ್‌ಬಿ–3 ವರ್ಷದ ಕೋರ್ಸ್‌

ಡಿಎಮ್‌ ನ್ಯೂರಾಲಜಿ–3 ವರ್ಷದ ಕೋರ್ಸ್‌

ನ್ಯೂರೋಸರ್ಜರಿ–6 ವರ್ಷದ ಕೋರ್ಸ್‌ ಎಂಬಿಬಿಎಸ್‌ ನಂತರ. ನ್ಯೂರಾಲಜಿಸ್ಟ್‌ ಆಗಲು ನಿಮಗೆ ತಾಳ್ಮೆ, ಬುದ್ಧಿವಂತಿಕೆ, ಜನರಲ್ಲಿ ವಿಶ್ವಾಸವಾಗಿ ಮಾತಾಡುವ ಕಲೆ, ನಿರ್ಧಾರ ತೆಗೆದುಕೊಳ್ಳುವ ಜಾಗ್ರತೆ, ಇತರ ಡಾಕ್ಟರ್‌ಗಳ ಜೊತೆ ಕೆಲಸ ಮಾಡುವ ಸಾಮರ್ಥ್ಯ ಬಹಳ ಮುಖ್ಯ. ಕೆಲವು ಹೆಸರಾಂತ ಡಿಎಂ (ನ್ಯೂರಾಲಜಿ) ಕೋರ್ಸ್‌ಗಳನ್ನು ಈ ಕೆಳಗಿನ ಇನ್ಸ್‌ಟಿಟ್ಯೂಟ್‌ಗಳಲ್ಲಿ ಮಾಡಬಹುದು.

1.‌ Institute of Human Behaviors and Allied Science (IHBAS)

2. Post graduate Institute of Medical Education and Research (PG)

3. Smt. NHL Municipal Medical College

4. Bangalore Medical College and Research Institute

5. NIMAANS - National Institute of Mental health and Nero science

6. AIIMS - All India Institute of Medical Science  ಮತ್ತು ಇನ್ನೂ ಅನೇಕ.

ನಿಮ್ಹಾನ್ಸ್‌ ಪ್ರವೇಶ ಪರೀಕ್ಷೆಯ ನೋಟಿಫಿಕೇಶನ್‌ ಜನವರಿ 5ರಂದು ಪ್ರಕಟ ಆಗಿದೆ. ಫೆಬ್ರುವರಿ 4 ಕೊನೆಯ ದಿನ. ಪರೀಕ್ಷೆ ಮಾರ್ಚ್‌ನಲ್ಲಿ. ಪೂರ್ಣ ವಿವರಕ್ಕೆ www.nimhans.ac.in ಎಂಬಿಬಿಎಸ್‌, ಎಂಡಿ, ಡಿಯಂ ನ್ಯೂರಾಲಜಿ ಮುಗಿಸಿದ ನಂತರ ಮೆಡಿಕಲ್‌ ಕೌನ್ಸಿಲ್‌ ಆಫ್‌ ಇಂಡಿಯಾದಲ್ಲಿ ರಿಜಿಸ್ಟ್ರೇಷನ್‌ ಮಾಡಬೇಕು. ಸರ್ಕಾರಿ ಉದ್ಯೋಗ, ಸ್ವಯಂ ಉದ್ಯೋಗ, ಆಸ್ಪತ್ರೆಗಳಲ್ಲಿ ಉದ್ಯೋಗ –ಹೀಗೆ ಅನೇಕ ಕಡೆ ಅವಕಾಶವಿದೆ.

3. ನಾನು ಪ್ರಸ್ತುತ ಎಂಜಿನಿಯರಿಂಗ್‌ ಮೊದಲ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಪಶುವೈದ್ಯನಾಗುವಾಸೆ. ಆದರೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಹೀಗೆ ಎಂಜಿನಿಯರಿಂಗ್‌ ಮುಂದುವರಿಸಲೆ? ಇಲ್ಲ, ಸಿಇಟಿಗೆ ಓದಲೇ? ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇರುವ ಶಿಷ್ಯವೇತನವನ್ನು ತಿಳಿಸಕೊಡಿ.

–ಹೆಸರು, ಊರು ಬೇಡ

ಉತ್ತರ: ನೀವು ಎಂಜಿನಿಯರ್‌ ಆಗಬೇಕೋ, ಪಶುವೈದ್ಯನಾಗಬೇಕೋ ಅನ್ನುವುದನ್ನು ದ್ವಿತೀಯ ಪಿಯುಸಿಯ ಶುರುವಿನಲ್ಲೇ ಯೋಚಿಸಬೇಕಿತ್ತು. ಈ ದ್ವಂದ್ವ ಈಗೇಕೆ ಬಂತು? ಎಂಜಿನಿಯರಿಂಗ್‌ನಲ್ಲಿ ನೀವು ತೆಗೆದುಕೊಂಡಿರುವ ವಿಷಯಗಳು ನಿಮಗೆ ಅರ್ಥವಾಗುತ್ತಿಲ್ಲವೇ?

ಪಶುವೈದ್ಯನಾಗಬೇಕಾದರೆ, ಪ್ರಾಣಿಗಳ ಬಗ್ಗೆ ಕಳಕಳಿ ಇರಬೇಕು. ‘ಭಯ’ ದೂರವಿಡಬೇಕು. ದಯೆ, ತಾಳ್ಮೆ, ಕರುಣೆ, ಸ್ವಾಂತನಗೊಳಿಸುವ ಶಕ್ತಿ ನಿಮ್ಮಲ್ಲಿ ಇದೆ ಅನ್ನಿಸಿದರೆ ನೀವು ಪರೀಕ್ಷೆ ಬರೆಯಿರಿ.

ಏಪ್ರಿಲ್‌ 18 ಮತ್ತು 19ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಬಿವಿಎಸ್‌ಸಿ ಮತ್ತು ಎಎಚ್‌ ಕೋರ್ಸ್‌ಗೆ ಕನಿಷ್ಠ ಶೇ 50 ಅಂಕವನ್ನು ಫಿಸಿಕ್ಸ್‌, ಕೆಮಿಸ್ಟ್ರಿ, ಬಾಯಾಲಜಿ ಮತ್ತು ಇಂಗ್ಲೀಷ್‌ನಲ್ಲಿ ಪಡೆದಿರಬೇಕು. ಶೇ 40 ಅಂಕ, ಎಸ್‌ಸಿ, ಎಸ್‌ಟಿ, ಸಿಎಟಿ1, 2ಎ, 2ಬಿ, 3ಎ, 3ಬಿ ಪಂಗಡದವರಿಗೆ. ಪಿಸಿಬಿಯ ಅಂಕ ಸಿಇಟಿಯಲ್ಲಿ ಬಂದಿರುವುದನ್ನು ಪರಿಗಣಿಸು

ತ್ತಾರೆ.

ಹೆಚ್ಚಿನ ವಿವರಗಳಿಗೆ www.kea.kar.nic.in/ ಅನ್ನು ಸಂಪರ್ಕಿಸಿ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಹಲವಾರು ಸ್ಕಾಲರ್‌ಷಿಪ್‌ಗಳಿವೆ. ನೀವು ಏನು ಮಾಡುತ್ತೀರಾ ಎಂದು ನಿರ್ಧರಿಸಿ. ಆಮೇಲೆ ತಿಳಿಸೋಣ!

ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನೆಗಳಿವೆಯೇ?

ವಿದ್ಯಾರ್ಥಿಗಳೇ, ವಿದ್ಯಾಭ್ಯಾಸದ ಬಗ್ಗೆ ನಿಮ್ಮಲ್ಲಿ ಸಾಕಷ್ಟು ಸಂದೇಹಗಳು–ಪ್ರಶ್ನೆಗಳು ಇರಬಹುದು. ಕೋರ್ಸ್‌ಗಳ ವಿವರಗಳು, ಬೇಕಾದ ಅರ್ಹತೆ, ಆಯ್ಕೆಗೆ ಬೇಕಾಗಿರುವ ಸಿದ್ಧತೆ, ವೃತ್ತಿಶಿಕ್ಷಣದ ವಿವರಗಳು, ಲಭ್ಯವಿರುವ ವಿದ್ಯಾರ್ಥಿವೇತನಗಳು – ಹೀಗೆ ನಿಮ್ಮ ಶಿಕ್ಷಣವನ್ನು ಕುರಿತಾದ ಎಲ್ಲ ಪ್ರಶ್ನೆಗಳಿಗೂ ನೀವು ‘ಶಿಕ್ಷಣ’ ಪುರವಣಿಯಲ್ಲಿ ಉತ್ತರವನ್ನು ಪಡೆಯಬಹುದು. ವೃತ್ತಿಶಿಕ್ಷಣ ಸಲಹೆಗಾರರಾದ ಅನ್ನಪೂರ್ಣ ಮೂರ್ತಿ ನಿಮ್ಮ ಸಂಶಯಗಳನ್ನು ನಿವಾರಿಸುತ್ತಾರೆ.

ನಮ್ಮ ವಿಳಾಸ: ಸಂಪಾದಕರು, ‘ಶಿಕ್ಷಣ ಪುರವಣಿ’, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001

ಇಮೇಲ್‌: shikshana@prajavani.co.in

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.