ಶುಕ್ರವಾರ, ಜೂನ್ 5, 2020
27 °C

ಕಾಮನ್‌ವೆಲ್ತ್‌: ವೇಟ್‌ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪರ್‌ದೀಪ್‌ ಸಿಂಗ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಾಮನ್‌ವೆಲ್ತ್‌: ವೇಟ್‌ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪರ್‌ದೀಪ್‌ ಸಿಂಗ್‌

ಗೋಲ್ಡ್‌ಕೋಸ್ಟ್‌: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಸೋಮವಾರ ಮತ್ತೊಂದು ಬೆಳ್ಳಿ ಪದಕ ಲಭಿಸಿದೆ.

ಪುರುಷರ 105 ಕೆ.ಜಿ. ವಿಭಾಗದ ವೇಟ್‌ ಲಿಫ್ಟಿಂಗ್‌ನಲ್ಲಿ ಪರ್‌ದೀಪ್‌ ಸಿಂಗ್‌ ಬೆಳ್ಳಿ ಪದಕ ಗೆದ್ದಿದ್ದಾರೆ. ಒಟ್ಟು 352 ಕೆ.ಜಿ. ಭಾರ ಎತ್ತುವ ಮೂಲಕ ಸಿಂಗ್‌ ಈ ಸಾಧನೆ ಮಾಡಿದ್ದಾರೆ.

ಸ್ನ್ಯಾಚ್‌ ಪ್ರಯತ್ನದಲ್ಲಿ 152 ಕೆ.ಜಿ., ಕ್ಲೀನ್‌ ಮತ್ತು ಜರ್ಕ್‌ನಲ್ಲಿ 200 ಕೆ.ಜಿ. ಭಾರವನ್ನು ಎತ್ತುವ ಮೂಲಕ ಬೆಳ್ಳಿ ಪದಕವನ್ನು ಕೊರಳಿಗೇರಿಕೊಂಡರು. ಒಟ್ಟು 360 ಕೆ.ಜಿ. ಭಾರ ಎತ್ತಿದ ಸಮೊವಾದ ಸನೆಲೆ ಮಾವೊ ಚಿನ್ನಕ್ಕೆ ಮುತ್ತಿಕ್ಕಿದರು.

ಪಂಜಾಬಿನ ಮಾಂಕಿ ಎಂಬ ಹಳ್ಳಿಯವರಾದ ಪರ್‌ದೀಪ್‌, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವಾಗಲೇ, ಶಿಕ್ಷಕರ ಸಲಹೆಗಳಿಂದ ವೇಟ್‌ ಲಿಫ್ಟಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.

ಭಾರತದ ಕ್ರೀಡಾಳುಗಳು ಈ ಕೂಟದಲ್ಲಿ ಈವರೆಗೂ 8 ಚಿನ್ನ, 3 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.