ಮಂಗಳವಾರ, ಜೂಲೈ 7, 2020
27 °C

ಮಹಿಳೆಯರ 25 ಮೀಟರ್ಸ್‌ ಏರ್‌ ಪಿಸ್ತೂಲ್ : ಹೀನಾ ಸಿಧುಗೆ ಚಿನ್ನದ ಪದಕ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಹಿಳೆಯರ 25 ಮೀಟರ್ಸ್‌ ಏರ್‌ ಪಿಸ್ತೂಲ್ : ಹೀನಾ ಸಿಧುಗೆ ಚಿನ್ನದ ಪದಕ

ಗೋಲ್ಡ್‌ಕೋಸ್ಟ್: ಕಾಮನ್‌ವೆಲ್ತ್‌ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತದ ಹೀನಾ ಸಿಧು ಅವರು ಚಿನ್ನದ ಪದಕವನ್ನು ಕೊರಳಿಗೇರಿಸಿಕೊಳ್ಳುವ ಮೂಲಕ ಹಿಂದಿನ ದಾಖಲೆಯನ್ನು ಮುರಿದು ಹಾಕಿದ್ದಾರೆ.

ಈ ಮೂಲಕ ಆರನೇ ದಿನದ ಆಟಕ್ಕೆ ಉತ್ತಮ ಶುಭಾರಂಭ ನೀಡಿದರು. ಮಹಿಳೆಯರ 25 ಮೀಟರ್ಸ್‌ ಏರ್‌ ಪಿಸ್ತೂಲ್ ವಿಭಾಗದಲ್ಲಿ ಸಾಧನೆ ಮಾಡಿರುವ ಸಿಧು ಅವರು ಒಟ್ಟು ಕಲೆಹಾಕಿದ್ದು 38 ಅಂಕಗಳು.

ಆಸ್ಟ್ರೇಲಿಯಾದ ಎಲೆನಾ ಗಾಲಿಯಾ ಗೋವಿಂಚ್(35 ಅಂಕ) ಬೆಳ್ಳಿ ಪದಕ, ಮಲೇಷಿಯಾದ ಅಲಿಯಾ ಸಜನಾ ಅಜಹರಿ (26–ಅಂಕ) ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಇನ್ನು ಪುರುಷರ ವಿಭಾಗದ ವೇಯ್ಟ್‌ ಲಿಫ್ಟಿಂಗ್‌ನಲ್ಲಿ ಭಾರತದ ಬಾಕ್ಸರ್ ಅಮಿತ್ ಪಂಘಾಲ್  ಸೆಮಿ ಫೈನಲ್ ತಲುಪಿದ್ದಾರೆ.

ಪುರುಷರ 50 ಮೀಟರ್ಸ್‌ ಏರ್‌ ಪಿಸ್ತೂಲ್ ವಿಭಾಗದಲ್ಲಿ ಚೈನ್ ಸಿಂಗ್ ಹಾಗೂ ಗಗನ್ ನಾರಾಂಗ್ ಯಾವುದೇ ಪದಕ ಗಳಿಸದೆ ನಿರಾಸೆ ಮೂಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.