ಗೋಲ್ಡ್ ಕೋಸ್ಟ್: ‘ಎಡ ಮೊಣಕೈಗೆ ಆಗಿರುವ ಉಳುಕು ನನ್ನ ವೃತ್ತಿ ಜೀವನಕ್ಕೆ ಕುತ್ತು ತರಬಹುದು’

– ಮಹಿಳೆಯರ ವೇಟ್‌ಲಿಫ್ಟಿಂಗ್‌ನ 90 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವೇಳೆ ಎಡ ಮೊಣಕೈ ಉಳುಕಿದ ಪರಿ ಣಾಮ ಸ್ಪರ್ಧೆಯಿಂದ ಹಿಂದೆ ಸರಿದ ಕಾಮನ್‌ವೆಲ್ತ್‌ನ ಮೊದಲ ಲಿಂಗಪರಿವರ್ತಿತ ಕ್ರೀಡಾಪಟು ಲಾರೆಲ್ ಹಬ್ಬರ್ಡ್ ಅವರ ಬೇಸರದ ನುಡಿಗಳಿವು.

ನ್ಯೂಜಿಲೆಂಡ್‌ನ ಲಾರೆಲ್ (40), ಸೋಮವಾರದ ಸ್ಪರ್ಧೆಯಲ್ಲಿ 132 ಕೆ. ಜಿ. ತೂಕ ಎತ್ತಿ ಕೂಟ ದಾಖಲೆ ನಿರ್ಮಿಸುವಾಗ ಗಾಯಗೊಂಡಿದ್ದರು.

‘ನನ್ನ ಎಡ ಭುಜಕ್ಕೆ ತೀವ್ರವಾಗಿ ಗಾಯವಾಗಿದೆ. ಪ್ರಾಯಶಃ, ಇದು ನನ್ನ ವೃತ್ತಿ ಜೀವನಕ್ಕೆ ಮುಕ್ತಾಯ ಹಾಡಲಿದೆ ಎಂದು ಅನಿಸುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಆದರೆ, ನನ್ನ ಸಾಮರ್ಥ್ಯ ಮೀರಿ ನಾನು ಪ್ರಯತ್ನಿಸಿದೆ. ಆ ತೃಪ್ತಿ ನನಗಿದೆ’ ಎಂದು ಅವರು ಹೇಳಿದ್ದಾರೆ.

ಈ ಸಲದ ಕಾಮನ್‌ವೆಲ್ತ್ ಕೂಟದಲ್ಲಿ ಲಾರೆಲ್ ಅವರ ಸ್ಪರ್ಧೆಯು ಅನೇಕರ ಹುಬ್ಬೇರಿಸಿತ್ತು. ಈಗ, ಲಿಂಗಪರಿವರ್ತಿತರೂ ಕಾಮನ್‌ವೆಲ್ತ್‌ನಂತಹ ಜಾಗತಿಕ ಮಟ್ಟದ ಕ್ರೀಡಾ ಕೂಟದಲ್ಲಿ ಸ್ಪರ್ಧಿಸುವ ಕುರಿತು ಹೊಸ ಚರ್ಚೆ ಆರಂಭವಾಗಲು ಇದು ಕಾರಣವಾಗಿದೆ. ಲಿಂಗ ಪರಿ ವರ್ತನೆ ಮಾಡಿಸಿಕೊಳ್ಳುವುದಕ್ಕಿಂತ ಮುನ್ನ ಗೆವಿನ್ ಹಬ್ಬರ್ಡ್ ಹೆಸರಿನಲ್ಲಿ ಅವರು ದೇಶವನ್ನು ಪ್ರತಿನಿಧಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.