ಹೊಳಲ್ಕೆರೆ: ತಾಲ್ಲೂಕಿನ ಗುಡ್ಡದ ಸಾಂತೇನಹಳ್ಳಿಯ ಮತಗಟ್ಟೆ ಅಧಿಕಾರಿ (ಬಿಎಲ್ಒ) ಎನ್.ಬಸವರಾಜ್ ಗ್ರಾಮದ ಮತದಾರರನ್ನು ಒಳಗೊಂಡ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದು, ಮಾಹಿತಿ ವಿನಿಮಯಕ್ಕೆ ಅವಕಾಶ ಕಲ್ಪಿಸಿದ್ದಾರೆ.

‘ವೋಟರ್ಸ್ ಲಿಸ್ಟ್ ಜಿಎಸ್ಎಚ್’ ಎಂಬ ಹೆಸರಿನಲ್ಲಿ ಗ್ರೂಪ್ ರಚಿಸಿದ್ದು, 300ಕ್ಕೂ ಹೆಚ್ಚು ಮತದಾರರನ್ನು ಗ್ರೂಪ್‌ಗೆ ಸೇರಿಸಿದ್ದಾರೆ. ಇದರಲ್ಲಿ ಮತದಾರರ ಪಟ್ಟಿ ತಯಾರಿಸುವುದು, ಹೊಸ ಮತದಾರರ ಸೇರ್ಪಡೆ, ಪಟ್ಟಿಯಲ್ಲಿನ ಹೆಸರು ರದ್ದುಪಡಿಸುವುದು, ತಿದ್ದುಪಡಿ, ಸ್ಥಳ ಬದಲಾವಣೆ, ಗುರುತಿನ ಚೀಟಿ ಪಡೆಯುವುದು, ಗುರುತಿನ ಚೀಟಿಯಲ್ಲಿನ ದೋಷಗಳ ತಿದ್ದುಪಡಿ ಮತ್ತಿತರ ಮಾಹಿತಿಯನ್ನು ಗ್ರೂಪ್‌ನ ಸದಸ್ಯರು ಸುಲಭವಾಗಿ ಪಡೆಯಬಹುದು.

‘ಗ್ರೂಪ್‌ನಲ್ಲಿ ಮತದಾರರ ಪಟ್ಟಿಯ ಪಿಡಿಎಫ್ ಫೈಲ್ ಹಾಕಿದ್ದೇನೆ. ಇದರ ಮೂಲಕ, ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಅವರು ಖಾತ್ರಿ ಮಾಡಿಕೊಳ್ಳಬಹುದು’ ಎಂದು ಬಸವರಾಜ್ ಮಾಹಿತಿ ನೀಡಿದರು.

‘ನಾನು ಶಿವಮೊಗ್ಗದಲ್ಲಿ ಎಂಜಿನಿಯರಿಂಗ್ ಓದುತ್ತಿದ್ದು, ಮತದಾರರ ಪಟ್ಟಿಗೆ ಸೇರಿಸಲು ಬೇಕಾದ ದಾಖಲೆಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳಿಸಿದೆ. ಇದರಿಂದ ನನ್ನ ಶ್ರಮ, ಹಣ, ಸಮಯ ಎಲ್ಲವೂ ಉಳಿತಾಯ ಆಯಿತು’ ಎನ್ನುತ್ತಾರೆ ವಿದ್ಯಾರ್ಥಿನಿ ಭೂಮಿಕಾ.

‘ಸಾಂತೇನಹಳ್ಳಿ ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿದ್ದು, ಗ್ರೂಪ್‌ನ ಸದಸ್ಯನಾಗಿದ್ದೇನೆ. ನಾನು ತಾತ್ಕಾಲಿಕವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಮೊನ್ನೆ ಗ್ರೂಪ್ ಮೂಲಕ ಮಾಹಿತಿ ಪಡೆದು ಬಸವರಾಜ್ ಅವರನ್ನು ಸಂಪರ್ಕಿಸಿದೆ. ನಂತರ ಇ–ಮೇಲ್ ಮೂಲಕ ದಾಖಲೆ ಕಳುಹಿಸಿ ನನ್ನ ಪತ್ನಿಯ ಹೆಸರು ಸೇರಿಸಿದ್ದೇನೆ’ ಎನ್ನುತ್ತಾರೆ ಮನೋಹರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.