ಶುಕ್ರವಾರ, ಆಗಸ್ಟ್ 14, 2020
26 °C

ಮೇಷ್ಟ್ರ ಮೊಗದಲ್ಲಿ ಮಂದಹಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಷ್ಟ್ರ ಮೊಗದಲ್ಲಿ ಮಂದಹಾಸ

ನಾನು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿಂಗಣಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದು. ನನ್ನ ನೆಚ್ಚಿನ ಕನ್ನಡ ಮೇಷ್ಟ್ರು ವಿ.ಎಸ್.ಗಲಗಲಿ ಗುರುಗಳು. ಅವರ ಮೊಗದಲ್ಲಿ ಸದಾ ಮಂದಹಾಸ, ಸರಳ ವ್ಯಕ್ತಿತ್ವ, ನೇರ ನುಡಿಗಳ ಮನುಷ್ಯ. ಮೊದಲು ನನಗೆ ಕಪ್ಪು ಹಲಗೆಯಲ್ಲಿ ಜೋಡಿಪದ ಹಾಕಿಕೊಟ್ಟು ತಿದ್ದಲು ಹೇಳುತ್ತಿದ್ದರು.

ದಿನಕ್ಕೊಂದು ಕಥೆ, ಹಾಡು ಹೇಳಿ ನಮ್ಮನ್ನು ರಂಜಿಸುತ್ತಿದ್ದರು. ಅವರು ಹೇಳುತ್ತಿದ್ದ ಜನಪದ ಗೀತೆಗಳು ನನಗೆ ಅಚ್ಚುಮೆಚ್ಚು. ಕನ್ನಡ ಓದುತ್ತಿದ್ದಾಗ ತಪ್ಪು ತಪ್ಪಾಗಿ ಓದಿದ್ದರೆ ಬೈಯದೇ ಶಾಂತಚಿತ್ತದಿಂದ ಇನ್ನೊಮ್ಮೆ ಓದಿಸಿ ಪದಗಳನ್ನು ಬಿಡಿಸಿ ಅದರ ಉಚ್ಚಾರಣೆದೊಂದಿಗೆ ಓದಿಸುತ್ತಿದ್ದರು.

ನಾನು ಅವರ ನೆಚ್ಚಿನ ಶಿಷ್ಯ ಆಗಿದ್ದೆ. ಅವರು ಮಾಡಿಸಿದ ಮಹಾಭಾರತದ ನಾಟಕ ಊರ ಜನರ ಮೆಚ್ಚುಗೆ ಗಿಟ್ಟಿಸಿಕೊಂಡಿತ್ತು. ನಾನು ಮಾಡಿದ ಕರ್ಣನ ಪಾತ್ರ ಮೆಚ್ಚಿ ಮೇಷ್ಟ್ರು ನನಗೆ ₹20 ಬಹುಮಾನ ಕೊಟ್ಟಿದ್ದರು. ಅವರ ನೆನಪಿನ ಕಾಣಿಕೆಯಾಗಿ ನೋಟನ್ನು ಇನ್ನೂ ತೆಗೆದಿಟ್ಟಿದ್ದೇನೆ.

-ಆರೀಫ ವಾಲೀಕಾರ, ರಾಣಿ ಚೆನ್ನಮ್ಮ ವಿವಿ ಬೆಳಗಾವಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.