ಮಂಗಳವಾರ, ಆಗಸ್ಟ್ 11, 2020
26 °C

ನಿನ್ನೆ ಆದಿತ್ಯನಾಥಗೆ ಚಪ್ಪಲಿಯಲ್ಲಿ ಹೊಡಿಯಿರಿ ಎಂದ್ರು; ಇಂದು ವಿಷಾದ ವ್ಯಕ್ತಪಡಿಸಿದ್ರು ದಿನೇಶ್‌ ಗುಂಡೂರಾವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿನ್ನೆ ಆದಿತ್ಯನಾಥಗೆ ಚಪ್ಪಲಿಯಲ್ಲಿ ಹೊಡಿಯಿರಿ ಎಂದ್ರು; ಇಂದು ವಿಷಾದ ವ್ಯಕ್ತಪಡಿಸಿದ್ರು ದಿನೇಶ್‌ ಗುಂಡೂರಾವ್‌

ಬೆಂಗಳೂರು: ‘ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕರ್ನಾಟಕಕ್ಕೆ ಬಂದರೆ ಚಪ್ಪಲಿಯಿಂದ ಹೊಡಿಯಿರಿ’ ಎಂದು ಶನಿವಾರ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ತಮ್ಮ ಹೇಳಿಗೆ ಭಾನುವಾರ ವಿಷಾದ ವ್ಯಕ್ತಪಡಿಸಿದ್ದಾರೆ.

‘ಕಠುವಾ ಮತ್ತು ಉನ್ನಾವ್‌ನಂಥಹ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ನಡೆದ ಪ್ರತಿಭಟನೆ ಭಾಷಣ ವೇಳೆ ಭಾವೋದ್ವೇಗದಿಂದ ವಿಷಯದ ಬಗ್ಗೆ ಮಾತನಾಡುವಾಗ ಹೇಳಿದ್ದೇನೆ. ಅದರ ಬಗ್ಗೆ ನನಗೆ ವಿಷಾದವಿದೆ. ಆದರೆ, ವಿಷಯ ಗಂಭೀರ, ಅದರ ಬಗ್ಗೆ ಕ್ರಮವಾಗಬೇಕು. ನನ್ನ ಮಾತಿನ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಬೇಕು. ಒಬ್ಬ ಮಹಿಳೆಗೆ ನ್ಯಾಯಕೊಡಿಸಬೇಕು ಎಂದಬುದೇ ನಮ್ಮ ಉದ್ದೇಶವಾಗಿತ್ತು ಬೇರೇನೂ ಅಲ್ಲ’ ಎಂದು ಅವರು ಹೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿದ್ದಾರೆ. ಜತೆಗೆ, ತಾವು ಎಎನ್‌ಐಗೆ ನೀಡಿರುವ ಸಂದರ್ಶನದ ಫೇಸ್‌ಬುಕ್‌ ಲೈವ್‌ನ ವಿಡಿಯೊದ ಲಿಂಕ್‌ವೊಂದನ್ನು ಟ್ವೀಟ್‌ನಲ್ಲಿ ಹಾಕಿದ್ದಾರೆ.

'ನಿನ್ನೆ ಪ್ರತಿಭಟನೆ ಮಾಡಿದ ವಿಚಾರ ಮುಖ್ಯ. ಅದು ಬಹಳ ಭಾವನಾತ್ಮಕ ವಿಷಯ. ಉತ್ತರಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ನಡೆದಿವೆ. ಉತ್ತರ ಪ್ರದೇಶ ಸಿಎಂ ಆದಿತ್ಯನಾಥ ಅವರು ಕುಟುಂಬಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿಲ್ಲ. ಎಫ್‌ಐಆರ್‌ ಸಹ ದಾಖಲಿಸಲು ಬಿಟ್ಟಿಲ್ಲ, ಅದರಲ್ಲೂ ಒಬ್ಬ ಬಿಜೆಪಿ ಶಾಸಕ ಆರೋಪಿಯಾಗಿರುವ ಕಾರಣ ಏನೂ ಮಾಡಲಿಲ್ಲ' ಎಂದು ದೂರಿದ್ದಾರೆ.

ಅತ್ಯಾಚಾರದಂತಹ ಕ್ರೂರ ಕೃತ್ಯ ನಡೆದಿವೆ. ಹೃದಯ ಕರಗಿಸುವ ಕೆಲಸ ಇದಾಗಿದೆ. ಆ ನೋವಿನಲ್ಲಿ ನಾನು ಮಾತನಾಡುತ್ತಿದ್ದೆ. ಆದಿತ್ಯನಾಥರು ಒಬ್ಬ ಸಂತ. ಸಂತರು ಇಂಥಹ ಘಟನೆಗೆ ಕಾರಣ ಕರ್ತರಾಗುತ್ತಾರಾ? ಸಿಎಂ ಸ್ಥಾನದಲ್ಲಿ ಕೂರುವ ಅರ್ಹತೆ ಇದೆಯಾ? ಎಂದು ಗುಂಡೂರಾವ್‌ ಪ್ರಶ್ನಿಸಿದ್ದಾರೆ.

‘ಭಾಷಣ ವೇಳೆ ಭಾವುಕನಾಗಿದ್ದೆ. ಬಂದಾಗ ಚಪ್ಪಲಿ ತೋರಿಸಿ ಎಂದು ಹೇಳಿದ್ದೆ. ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಇದು ಪೂರ್ವ ಯೋಚಿತ ಅಲ್ಲ, ಭಾಷಣದ ಮಧ್ಯೆ ಭಾವನಾತ್ಮಕವಾಗಿ ಈ ಮಾತು ಆಡಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಆದಿತ್ಯನಾತ್‌ ರಾಜೀನಾಮೆ ಪಡೆದು ಕೇಂದ್ರ ಸರ್ಕಾರ ಅವರನ್ನು ಮನೆಗೆ ಕಳುಹಿಸಲಿ. ನಮ್ಮ ನಾಡಿನ, ಆದಿ ಚುಂಚನಗಿರಿ ಮಠದ ಶ್ರೀಗಳಿಗೆ ಆದಿತ್ಯನಾಥ ಅವರನ್ನು ಹೋಲಿಸಬೇಡಿ. ನಮ್ಮ ಸ್ವಾಮೀಜಿಗಳನ್ನು ಅಪಮಾನ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆದಿತ್ಯನಾಥ ಅವರ ಹಿಂದಿನ ಚರಿತ್ರೆ ನೋಡಿ, ಅವರೊಬ್ಬ ಕ್ರಿಮಿನಲ್‌ ಅಪರಾಧ ಹಿನ್ನೆಲೆಯುಳ್ಳವರು’ ಎಂದು ಹೇಳಿದ್ದಾರೆ.

ಭಾವೋದ್ವೇಗದಿಂದ ಹೇಳಿದ್ದೇನೆ. ವಿಷಯದ ಬಗ್ಗೆ ಮಾತನಾಡುವಾಗ ಹೇಳಿದ್ದೇನೆ. ಅದರ ಬಗ್ಗೆ ನನಗೆ ವಿಷಾದವಿದೆ. ಆದರೆ, ವಿಷಯ ಗಂಭೀರ, ಅದರ ಬಗ್ಗೆ ಕ್ರಮವಾಗಬೇಕು. ನನ್ನ ಮಾತಿನ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಬೇಕು. ಒಬ್ಬ ಮಹಿಳೆಗೆ ನ್ಯಾಯಕೊಡಿಸಬೇಕು ಎಂದಬುದೇ ನಮ್ಮ ಉದ್ದೇಶವಾಗಿದೆ’ ಎಂದು ಅವರು ಹೇಳಿದ್ದಾರೆ.

ಪ್ರತಾಪ ಸಿಂಹ ಅವರು ಧರ್ಮ ಪಾಲನೆ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದ ಗುಂಡೂರಾವ್‌, ಧರ್ಮನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

‘ಯೋಗಿ ಆದಿತ್ಯನಾಥ್‌ಗೆ ಚಪ್ಪಲಿಯಿಂದ ಹೊಡೆಯಿರಿ’: ದಿನೇಶ್‌ ಗುಂಡೂರಾವ್‌ ವಿವಾದಾತ್ಮಕ ಹೇಳಿಕೆ

'ಆದಿತ್ಯನಾಥಗೆ ಚಪ್ಪಲಿಯಲ್ಲಿ ಹೊಡಿಬೇಕೆಂಬ ಮಾತನ್ನು ಮುಲ್ಲಾನೋ, ಮೌಲ್ವಿ ಬಗ್ಗೆನೋ ಆಡಿದ್ರೆ ಆ ಕೆಲಸವನ್ನು ನಿಮ್ಮ ಪತ್ನಿ ನಿಮಗೆ ಮಾಡುತ್ತಿದ್ದರು'

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.