ಗುರುವಾರ , ಆಗಸ್ಟ್ 13, 2020
21 °C
ಕಾಂಗ್ರೆಸ್‌ ಟಿಕೆಟ್‌ ನೀಡದಿರುವುದು ಕಾರ್ಯಕರ್ತರಲ್ಲಿ ನೋವು ತಂದಿದೆ

ಜನಬೆಂಬಲ ನೋಡಿ ಸ್ವತಂತ್ರ ಸ್ಪರ್ಧೆ ಬಗ್ಗೆ ನಿರ್ಧಾರ: ಬಿ.ಶಿವರಾಮು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಬೆಂಬಲ ನೋಡಿ ಸ್ವತಂತ್ರ ಸ್ಪರ್ಧೆ ಬಗ್ಗೆ ನಿರ್ಧಾರ: ಬಿ.ಶಿವರಾಮು

ಹಾಸನ: ನಾನು ಬೇಲೂರಿನಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ನಿಜ. ‌ಟಿಕೆಟ್ ಕೈ ತಪ್ಪಿದ್ದರಿಂದ ನನಗಿಂತ ಕಾರ್ಯಕರ್ತರಿಗೆ ಹೆಚ್ಚಿನ ನೋವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಶಿವರಾಮು ಸೋಮವಾರ ಹೇಳಿದರು.

ಇಂದೇ ಬೇಲೂರಿಗೆ ತೆರಳಿ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವೆ. ಜನಬೆಂಬಲ ನೋಡಿ ಸ್ವತಂತ್ರ ಸ್ಪರ್ಧೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

ನಾನು ಈವರೆಗೂ ಕಾಂಗ್ರೆಸ್‌ನಲ್ಲಿ ಶಿಸ್ತಿನ ಸಿಪಾಯಿ, ನನಗೆ ಟಿಕೆಟ್ ಕೈ ತಪ್ಪಲು ಉಸ್ತುವಾರಿ ಸಚಿವ ಎ.ಮಂಜು ಕಾರಣ ಎಂಬ ಕಾರ್ಯಕರ್ತರ ಆರೋಪ ಸರಿ ಇರಬಹುದು. ಬೇಲೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ, ಸೋಲುತ್ತೆ ಅಂತ ಈಗಲೇ ಹೇಳಲಾಗದು ಎಂದು ಹೇಳಿದರು.

ಇನ್ನಷ್ಟು: ಶಾಸಕ ನಿಧನ: ಅನುಕಂಪದ ಲಾಭ ಪಡೆಯಲು ‘ಕೈ’ ಚಿತ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.