ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಲಿತರ ಏಳ್ಗೆಗೆ ಶ್ರಮಿಸಿದ ಅಂಬೇಡ್ಕರ್’

ಡಾ.ಬಿ.ಆರ್.ಅಂಬೇಡ್ಕರ 127ನೇ ಜಯಂತ್ಯುತ್ಸವ
Last Updated 16 ಏಪ್ರಿಲ್ 2018, 11:46 IST
ಅಕ್ಷರ ಗಾತ್ರ

ವಿಜಯಪುರ: ‘ಎಲ್ಲರೂ ವಿದೇಶಕ್ಕೆ ಹೋದಾಗ ಬಟ್ಟೆ ಸಲಕರಣೆಗಳನ್ನು ತಂದರೆ, ಜಗತ್ತಿಗೆ ಮಾದರಿ ಸಂವಿಧಾನದ ಕೊಡುಗೆ ನೀಡಿದ ಡಾ.ಬಿ.ಆರ್. ಅಂಬೇಡ್ಕರ ಪುಸ್ತಕಗಳನ್ನ ತುಂಬಿದ ಪೆಟ್ಟಿಗೆಗಳನ್ನು ಹೊತ್ತು ತಂದವರು’ ಎಂದು ಸಂತೋಷ ಹಂಜಗಿ ಹೇಳಿದರು.

ಬಸವೇಶ್ವರ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ದಿ ಸಂಸ್ಥೆ ನಗರದ ಬಸವೇಶ್ವರ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ದಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕ‌ರ್ ಅವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ‘ಅವರಿಗೆ ಯಾವ ವಸ್ತುವಿನ ಮೇಲೆ ವ್ಯಾಮೋಹ ಇರಲಿಲ್ಲ. ಜ್ಞಾನದ ಹಸಿವಿತ್ತು. ತಮ್ಮಲ್ಲಿ ಹಣವಿದ್ದರೆ ಕೆಲವೊಂದಿಷ್ಟನ್ನು ಹೊಟ್ಟೆ ತುಂಬಿಕೊಳ್ಳಲು ಇಟ್ಟುಕೊಂಡು, ಉಳಿದ ಹಣವನ್ನು ಪುಸ್ತಕ ಖರೀದಿಗೆ ಖರ್ಚು ಮಾಡುತ್ತಿದ್ದರು’ ಎಂದರು.

ಸಂತೋಷ ಬಾಲಾಗವಿ, ರಮೇಶ ಹೊನ್ನಮೊಡೆ, ನಾಗರಾಜ ಕಬಾಡೆ, ಲಕ್ಷ್ಮಣ ಇಲಕಲ್ಲ, ವಸಂತ ಹೊನಮೊಡೆ ಉಪಸ್ಥಿತರಿದ್ದರು.


ಡಾ.ಅಂಬೇಡ್ಕರ ಕಾಲೊನಿ ಅಭಿವೃದ್ಧಿ ಸಂಘ: ಮಹಿಳಾ ಸಬಲೀಕರಣಕ್ಕಾಗಿ ಲೋಕಸಭೆಯಲ್ಲಿ ಹಿಂದು ಕೋಡ್ ಬಿಲ್ ಮಂಡಿಸಿದ ಖ್ಯಾತಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಉಪನ್ಯಾಸಕಿ ಡಾ. ಸುಜಾತ ಚಲವಾದಿ ಹೇಳಿದರು.

ಇಲ್ಲಿನ ನವರಸಪುರ ಗ್ರಾಮದಲ್ಲಿ ಡಾ.ಅಂಬೇಡ್ಕರ ಕಾಲೊನಿ ಅಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಲ್‌ ಮಂಡಿಸಿದಾಗ ಬಹುಮತ ಸಿಗದ ಕಾರಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಧ್ವನಿ ಎತ್ತಿದರು ಎಂದರು.

ಅರಣ್ಯಾಧಿಕಾರಿ ಮಹೇಶ ಕ್ಯಾತನವರ, ರಮೇಶ ಅರಕೇರಿ, ಜಿ.ಎಸ್.ಕಾಂಬಳೆ, ಶಂಕರ ಅವಧಿ, ವಿನೋದ ಕೋಟ್ಯಾಳ, ಶಂಕರ ಕಟ್ಟಿಮನಿ, ಎ.ಎನ್.ಕಾಂಬಳೆ, ಶಿವರಾಜ ಓತಿಹಾಳ, ಎಸ್.ಎಲ್.ಇಂಗಳೇಶ್ವರ, ಎಸ್.ಟಿ. ಅವಧಿ, ಎಂ.ಬಿ.ತೋಟದ, ಗಣೇಶ ಗುನ್ನಾಪೂರ, ಆನಂದ ಶಹಾಪುರ, ಎಸ್.ಬಿ.ಚಲವಾದಿ, ಮಹಾದೇವಿ ಅಥರ್ಗಾ ಉಪಸ್ಥಿತರಿದ್ದರು.

ಜಂಬಗಿ ಗ್ರಾಮ ಪಂಚಾಯ್ತಿ:

ತಾಲ್ಲೂಕಿನ ಜಂಬಗಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಆಚರಿಸಲಾಯಿತು.
ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಸಂಗು ಗುದಳೆ, ಕಾರ್ಯದರ್ಶಿ ಬಂಡೆಪ್ಪ ತೇಲಿ ಮಾತನಾಡಿದರು. ಬಿ.ಪಿ. ಭಾವಿಮನಿ, ಎಸ್.ಎಸ್‌.ತೋಟದ, ಎಸ್.ಎಚ್.ಮುಲ್ಲಾ, ಬಿ.ಡಿ.ಕಟಾಯಿ, ಎಸ್.ಎಚ್.ಉಡಚಾಣ, ಎಂ.ಡಿ. ಮಾಲಗಾರ, ಡಿ.ಆರ್.ಸಂಕದ, ಮಲಕಪ್ಪ ವಾಲಿಕಾರ, ಪ್ರಕಾಶ ಹಚಡದ, ಗುರುರಾಜ ಅರಕೇರಿ, ಉಮೇಶ ಲೋಗಾವಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT