ಕುಕ್ಕರ್‌ ವಿತರಿಸಿದ ಕಾಂಗ್ರೆಸ್‌ ಮುಖಂಡ

ಶನಿವಾರ, ಮಾರ್ಚ್ 23, 2019
21 °C

ಕುಕ್ಕರ್‌ ವಿತರಿಸಿದ ಕಾಂಗ್ರೆಸ್‌ ಮುಖಂಡ

Published:
Updated:
ಕುಕ್ಕರ್‌ ವಿತರಿಸಿದ ಕಾಂಗ್ರೆಸ್‌ ಮುಖಂಡ

ಬೆಂಗಳೂರು: ಮಹದೇವಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎ.ಸಿ.ಶ್ರೀನಿವಾಸ್‌ ಅವರ ಭಾವಚಿತ್ರವಿರುವ ಕುಕ್ಕರ್‌ ಬಾಕ್ಸ್‌ಗಳನ್ನು ಹಗದೂರು ವಾರ್ಡ್‌ನಲ್ಲಿ ವಿತರಿಸಲಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

‘ಇಲ್ಲಿನ ಗಾಂಧಿಪುರ ಹಾಗೂ ವಿಜಯನಗರದ ಕೊಳೆಗೇರಿಗಳಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಎಸ್.ಉದಯಕುಮಾರ್ ಅವರು ಕುಕ್ಕರ್‌

ಗಳನ್ನು ವಿತರಿಸಿದ್ದಾರೆ. ಈ ಹಿಂದೆಯೂ ಕುಕ್ಕರ್‌ ಹಾಗೂ ಸೀರೆಗಳನ್ನು ವಿತರಿಸಲಾಗಿತ್ತು’ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದರು.

‘ಈ ಬಾಕ್ಸ್‌ಗಳ ಮೇಲೆ ಕಾಂಗ್ರೆಸ್‌ಗೆ ಮತ ನೀಡಿ, ಮಹದೇವಪುರ ಉಳಿಸಿ ಎಂಬ ವಾಕ್ಯವನ್ನು ಮುದ್ರಿಸಲಾಗಿದೆ. ಇಮ್ಮಡಿಹಳ್ಳಿ, ನಾಗೊಂಡನಹಳ್ಳಿಯಲ್ಲೂ ಮತದಾರರಿಗೆ ಆಮಿಷ ತೋರಿಸಲಾಗುತ್ತಿದೆ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry