ಪ್ರೇಯಸಿಯ ದೇಹವನ್ನು 11 ತುಂಡಾಗಿ ಕತ್ತರಿಸಿ, ವಿಲೇವಾರಿ ಮಾಡುವ ವೇಳೆ ಸಿಕ್ಕಿ ಬಿದ್ದ ಪ್ರಿಯಕರ

ಬುಧವಾರ, ಮಾರ್ಚ್ 20, 2019
31 °C

ಪ್ರೇಯಸಿಯ ದೇಹವನ್ನು 11 ತುಂಡಾಗಿ ಕತ್ತರಿಸಿ, ವಿಲೇವಾರಿ ಮಾಡುವ ವೇಳೆ ಸಿಕ್ಕಿ ಬಿದ್ದ ಪ್ರಿಯಕರ

Published:
Updated:
ಪ್ರೇಯಸಿಯ ದೇಹವನ್ನು 11 ತುಂಡಾಗಿ ಕತ್ತರಿಸಿ, ವಿಲೇವಾರಿ ಮಾಡುವ ವೇಳೆ ಸಿಕ್ಕಿ ಬಿದ್ದ ಪ್ರಿಯಕರ

ಸೂರತ್‌: ವಿವಾಹಿತ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಕೊಂದು ಶವವನ್ನು 11 ತುಂಡುಗಳಾಗಿ ಕತ್ತರಿಸಿ ವಿಲೇವಾರಿ ಮಾಡುತ್ತಿದ್ದ ವೇಳೆ ಸೋಮವಾರ ತಡ ರಾತ್ರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.‌

ಪೊಲೀಸ್‌ ಉನ್ನತ ಮೂಲಗಳ ಪ್ರಕಾರ ‘ಶಹನವಾಜ್‌ ಶೇಖ್‌ ಎಂಬಾತ ಬಂಧಿತ ಆರೋಪಿ. ಆತ ಭಾನುವಾರ ರಾತ್ರಿ ತನ್ನ ಪ್ರೇಯಸಿ ಜುಲೇಖಾ ಶೇಖ್‌(32) ಅವರನ್ನು ಲಾಲ್ ಗೇಟ್ ಪ್ರದೇಶದಲ್ಲಿರುವ ಖಾಲಿ ಪ್ಲಾಟ್‌ವೊಂದಕ್ಕೆ ಕರೆದೊಯ್ದಿದ್ದಾನೆ. ಬಳಿಕ ಆಕೆಯನ್ನು ಕೊಂದು ಶವವನ್ನು 11 ತುಂಡುಗಳಾಗಿ ಕತ್ತರಿಸಿದ್ದಾನೆ’ ಎಂದು ತಿಳಿದುಬಂದಿದೆ.

https://www.hindustantimes.com/india-news/married-man-caught-disposing-of-girlfriend-s-body-parts-in-surat/story-z9gpgm8w82RvYX57owGDXI.html

ಪ್ರಕರಣ ಸಂಬಂಧ ಮಂಗಳವಾರ ಮಾತನಾಡಿರುವ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು, ‘ದೇಹದ ಭಾಗಗಳನ್ನು ತುಂಬಿದ್ದ ಬ್ಯಾಗ್‌ನೊಂದಿಗೆ ಶೇಖ್‌ ಸೆರೆಸಿಕ್ಕಿದ್ದಾನೆ. ಸೆರೆಸಿಕ್ಕುವ ಮುನ್ನ ಆತ ಸೂರತ್‌ನಲ್ಲಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಸೇತುವೆ ಮೇಲಿಂದ ದೇಹದ ಹಲವು ಭಾಗಗಳನ್ನು ನದಿಗೆ ಎಸೆದಿದ್ದ’ ಎಂದು ಹೇಳಿದ್ದಾರೆ.

ಹೆಂಡತಿ ಹಾಗೂ ಇಬ್ಬರು ಮಕ್ಕಳ ಜೊತೆ ಇಲ್ಲಿನ ಲಾಲ್‌ ಗೇಟ್‌ ಪ್ರದೇಶದಲ್ಲಿ ವಾಸವಾಗಿದ್ದ ಶೇಖ್‌ಗೆ ಜುಲೇಖಾ 2 ವರ್ಷಗಳ ಹಿಂದೆ ಪರಿಚಯವಾಗಿದ್ದರು.

ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇತ್ತೀಚೆಗೆ ಜುಲೇಖಾ ಮತ್ತು ಶೇಖ್‌ ಹೆಂಡತಿ ನಡುವೆ ಜಗಳವಾಗಿತ್ತು. ಜಗಳದ ಬಳಿಕ ಹೆಂಡತಿಯನ್ನು ಬಿಟ್ಟು ತನ್ನೊಡನೆ ಬರುವಂತೆ ಜುಲೇಖಾ ಶೇಖ್‌ನನ್ನು ಪೀಡಿಸುತ್ತಿದ್ದಳು. ಅದಲ್ಲದೆ ತನಗೆ ₹ 20 ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಳು ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.

ಪೊಲೀಸರು ವಿಚಾರಣೆ ವೇಳೆ ಪ್ಲಾಟ್‌ನಲ್ಲಿದ್ದ ಮಹಿಳೆಯ ತಲೆಯನ್ನು ವಶಕ್ಕೆ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry