ಶನಿವಾರ, ಆಗಸ್ಟ್ 8, 2020
23 °C

ಯಡಿಯೂರಪ್ಪಗಿಂತಲೂ ಪ್ರಮುಖರೆನ್ನಿಸಿಕೊಳ್ಳಲು ಅನಂತಕುಮಾರ ಹೆಗಡೆ, ಪ್ರತಾಪ್ ಸಿಂಹ ಒದ್ದಾಟ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಡಿಯೂರಪ್ಪಗಿಂತಲೂ ಪ್ರಮುಖರೆನ್ನಿಸಿಕೊಳ್ಳಲು ಅನಂತಕುಮಾರ ಹೆಗಡೆ, ಪ್ರತಾಪ್ ಸಿಂಹ ಒದ್ದಾಟ: ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌. ಯಡಿಯೂರಪ್ಪ ಅವರಿಗಿಂತಲೂ ತಾವು ಪ್ರಮುಖರು ಎಂದು ಬಿಂಬಿಸಿಕೊಳ್ಳಲು ಸಂಸದ ಪ್ರತಾಪ್ ಸಿಂಹ ಮತ್ತು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಒದ್ದಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಮತ್ತು ತಮ್ಮನ್ನು ರಾಜಕೀಯವಾಗಿ ಪ್ರಮುಖ ವ್ಯಕ್ತಿ ಎಂದು ಬಿಂಬಿಸಿಕೊಳ್ಳಲು ಸಣ್ಣ ಅಪಘಾತವೊಂದನ್ನು ಅನಂತಕುಮಾರ ಹೆಗಡೆ ಬಳಸಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಬಸವರಾಜು ಎಪಿ. ಎಂಬುವವರು ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, ‘ಬಿಜೆಪಿಯ @BJP4Karnataka ಕೊಪ್ಪ ಘಟಕದ ಅಧ್ಯಕ್ಷ ರಮೇಶ್ ಅವರ ಸಹೋದರ ನಾಗೇಶ್ ಎಂಬುವವರ ಹೆಸರಲ್ಲಿ ಈ ಲಾರಿ ನೋಂದಣಿ ಆಗಿದೆ. Mr @AnantkumarH ಆರೋಪಕ್ಕೆ ಮಿತಿಯಿರಲಿ, ನಿಮಗೆ ನಾಚಿಗೆಯಾಗಬೇಕು!’ ಎಂದು ಟ್ವೀಟ್ ಮಾಡಿದ್ದಾರೆ.

ಮಂಗಳವಾರ ರಾತ್ರಿ 11.30ಕ್ಕೆ  ಹಾವೇರಿ‌ ಜಿಲ್ಲೆ ರಾಣಿಬೆನ್ನೂರು ಹಲಗೇರಿ ಸಮೀಪ ಸಚಿವ ಅನಂತಕುಮಾರ ಹೆಗಡೆಯವರ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆಯಲು ಯತ್ನಿಸಿತ್ತು. ಆದರೆ ಗುರಿ ತಪ್ಪಿದ ಲಾರಿ ಸಚಿವ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದೊಂದು ಅಪಘಾತ ಅಲ್ಲ, ತನ್ನ ಪ್ರಾಣಕ್ಕೆ ಹಾನಿಯುಂಟು ಮಾಡಲು ನಡೆಸಿದ ಯತ್ನ ಎಂದು ಸಚಿವರು ಟ್ವೀಟ್ ಮಾಡಿದ್ದರು.

ಇನ್ನಷ್ಟು...

ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ವಾಹನಕ್ಕೆ ಡಿಕ್ಕಿ ಹೊಡೆಯಲು ಬಂದ ಲಾರಿ; ಅದೃಷ್ಟವಶಾತ್ ಪಾರಾದ ಸಚಿವರು

ಅನಂತ ಕುಮಾರ ಹೆಗಡೆ ಅವರನ್ನು ರಾಜಕೀಯವಾಗಿ ಎದುರಿಸಿ: ಸಿಎಂಗೆ ಪ್ರತಾಪ್ ಸಿಂಹ ಸವಾಲು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.