ಶನಿವಾರ, ಫೆಬ್ರವರಿ 27, 2021
28 °C

ವರುಣ್‌ ಈಗ ಟೈಲರ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರುಣ್‌ ಈಗ ಟೈಲರ್‌!

ಬಾಲಿವುಡ್‌ ನಟ ವರುಣ್‌ ಧವನ್‌ ಬಟ್ಟೆ ಹೊಲಿಯುತ್ತಿದ್ದಾರೆ! ಟೈಲರಿಂಗ್‌ ವೃತ್ತಿಯಲ್ಲಿ ನೈಪುಣ್ಯವನ್ನೂ ಸಾಧಿಸುತ್ತಾರೆ!

ಅರೆ! ಪ್ರಯೋಗಾತ್ಮಕ ಪಾತ್ರಗಳಲ್ಲಿ ನಟಿಸುತ್ತಲೇ ಕಮರ್ಷಿಯಲ್‌ ಹಿಟ್‌ಗಳನ್ನು ಕೊಡುತ್ತಿರುವ ಬಾಲಿವುಡ್‌ನ ಯುವ ತಾರೆಗೆ ಏನಾಯಿತು? ಇದು,‌ ಅವರ ಚಿತ್ರ ಬದುಕಿನ ಮತ್ತೊಂದು ಪ್ರಯೋಗಾತ್ಮಕ ಪ್ರಯತ್ನ. ಅಷ್ಟೇ.

‘ಅಕ್ಟೋಬರ್’ ಚಿತ್ರದಲ್ಲಿನ ನಟನೆಗಾಗಿ ಸಿನಿ ಪಂಡಿತರ ಪ್ರಶಂಸೆ ಗಳಿಸಿದ್ದ ಈ ನಟ, ಪ್ರಸ್ತುತ ‘ಸೂಯಿ ಧಾಗ: ಮೇಡ್‌ ಇನ್‌ ಇಂಡಿಯಾ’ ಚಿತ್ರದಲ್ಲಿ ನಟಿಸುತ್ತಿದ್ದು, ಮೊದಲ ಬಾರಿಗೆ ದರ್ಜಿಯ (ಟೈಲರ್) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಹೊಸ ರೀತಿಯ ಪಾತ್ರವಾದ್ದರಿಂದ ಇದಕ್ಕಾಗಿ ಅಭ್ಯಾಸ ನಿರತರಾಗಿದ್ದಾರೆ.

‘ಬದ್ಲಾಪುರ್ ಮತ್ತು ಅಕ್ಟೋಬರ್ ಚಿತ್ರಗಳಲ್ಲಿನ ಪಾತ್ರಗಳಿಗೆ ತಕ್ಕಂತೆ ಸಾಕಷ್ಟು ಕಸರತ್ತು ನಡೆಸಿದ್ದೆ. ಆದರೆ ಈ ಚಿತ್ರದಲ್ಲಿನ ಪಾತ್ರಕ್ಕಾಗಿ ಕಸರತ್ತು ನಡೆಸುವುದಷ್ಟೇ ಅಲ್ಲ, ಹೊಸ ಕೆಲಸವನ್ನೂ ಕಲಿತೆ’ ಎಂದು ಅವರು ಹೇಳಿದ್ದಾರೆ.

‘ಚಿತ್ರದಲ್ಲಿ ದರ್ಜಿ ಪಾತ್ರ ನನ್ನದು. ಬಟ್ಟೆ ಹೊಲಿಯುವುದನ್ನೂ ಕಲಿಯಲೇಬೇಕಲ್ಲ? ಈ ವರೆಗೆ ಇಂತಹ ಪಾತ್ರದಲ್ಲಿ ನಟಿಸಿರಲಿಲ್ಲ. ಜೀವನಪೂರ್ತಿ ನೆನಪುಳಿಯುವಂತಹ ಕೆಲವು ಪಾತ್ರಗಳು ಇರುತ್ತವೆ. ಅವುಗಳಲ್ಲಿ ಇದೂ ಒಂದು. ನನ್ನಲ್ಲಿನ ನಟನನ್ನು ಈ ಪಾತ್ರದ ಮೂಲಕ ಹೊರತರಲು ಅವಕಾಶ ಒದಗಿ ಬಂದಿದೆ’ ಎಂದಿದ್ದಾರೆ.

ಚಿತ್ರದಲ್ಲಿ ವರುಣ್‌ಗೆ ನಾಯಕಿಯಾಗಿ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ. ಶರತ್ ಕಟಾರಿಯಾ ನಿರ್ದೇಶನದ ಈ ಚಿತ್ರಕ್ಕೆ ಆದಿತ್ಯ ಚೋಪ್ರಾ ಮತ್ತು ಮನೀಶ್‌ ಶರ್ಮ ಹಣ ಸುರಿದಿದ್ದಾರೆ. ಚಿತ್ರ ಸೆಪ್ಟೆಂಬರ್ 28ಕ್ಕೆ ತೆರೆಕಾಣಲಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.