ಧೂಳಖೇಡ ಚೆಕ್‌ಪೋಸ್ಟ್‌ನಲ್ಲಿ ₹ 12 ಲಕ್ಷ ನಗದು ವಶ

7

ಧೂಳಖೇಡ ಚೆಕ್‌ಪೋಸ್ಟ್‌ನಲ್ಲಿ ₹ 12 ಲಕ್ಷ ನಗದು ವಶ

Published:
Updated:

ವಿಜಯಪುರ: ಜಿಲ್ಲೆಯ ಚಡಚಣ ತಾಲ್ಲೂಕಿನ ಗಡಿ ಭಾಗದ ಧೂಳಖೇಡ ಬಳಿಯ ಚೆಕ್‌ಪೋಸ್ಟ್‌ನಲ್ಲಿ, ಗುರುವಾರ ವಾಹನಗಳ ತಪಾಸಣೆ ನಡೆಸುವ ಸಂದರ್ಭ, ಪ್ರತ್ಯೇಕ ಎರಡು ಘಟನೆಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 12 ಲಕ್ಷ ನಗದು ಪತ್ತೆಯಾಗಿದೆ.

ಚುನಾವಣಾ ಅಧಿಕಾರಿಗಳು, ಝಳಕಿ ಠಾಣೆ ಪೊಲೀಸರು ಜಂಟಿಯಾಗಿ ಸರ್ಕಾರಿ ಬಸ್‌ಗಳ ತಪಾಸಣೆ ನಡೆಸಿದ ಸಂದರ್ಭ ನಗದು ಪತ್ತೆಯಾಗಿದೆ.

ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಹೊರಟಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಳ್ಳೊಳ್ಳೆಪ್ಪ ಹಗರಿ ಬಳಿ ₹ 4 ಲಕ್ಷ ದಾಖಲೆ ಇಲ್ಲದ ಹಣ ಸಿಕ್ಕರೆ, ಸೊಲ್ಲಾಪುರದಿಂದ ಸಿಂದಗಿಗೆ ಚಲಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ತಿಪ್ಪೇಸ್ವಾಮಿ ಬಳಿ ದಾಖಲೆ ಇಲ್ಲದ ₹ 8 ಲಕ್ಷ ನಗದು ಸಿಕ್ಕಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ಝಳಕಿ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry