ಸೋಮವಾರ, ಮಾರ್ಚ್ 8, 2021
26 °C

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಪೋಷಕರ ಎದುರೇ ಜೀವಂತ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಪೋಷಕರ ಎದುರೇ ಜೀವಂತ ದಹನ

ರಾಂಚಿ: ನಾಲ್ವರು ಯುವಕರು 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆಯ ಕುಟುಂಬದ ಸದಸ್ಯರ ಎದುರೇ ಎದುರೇ ಸಜೀವ ದಹನ ಮಾಡಿದ್ದಾರೆ.

ಬಾಲಕಿಯ ಕುಟುಂಬದ ಸದಸ್ಯರು ಮದುವೆಗೆಂದು ಬೇರೆ ಊರಿಗೆ ಹೋಗಿದ್ದಾಗ ಆಕೆಯನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ 160 ಕಿ.ಮೀ. ದೂರವಿರುವ ಛಾತ್ರಾ ಜಿಲ್ಲೆಯ ಇಟ್ಖೋರಿ ಗ್ರಾಮದಲ್ಲಿ ಘಟನೆ ನಡೆದಿದೆ.

ಈ ವಿಷಯವನ್ನು ಬಾಲಕಿಯ ಪೋಷಕರು ಗ್ರಾಮ ಪಂಚಾಯಿತಿಯಲ್ಲಿ ಪ್ರಶ್ನಿಸಿದ್ದರು. ಆರೋಪಿಗಳು ₹ 50 ಸಾವಿರ ದಂಡ ಕಟ್ಟಿ ರಾಜಿ ಮಾಡಿಕೊಳ್ಳಬೇಕು ಪಂಚಾಯಿತಿ ಮುಖಂಡರು ಆದೇಶಿಸಿದ್ದರು.

ಪಂಚಾಯಿತಿ ಆದೇಶದಿಂದ ಕೆರಳಿದ ಯುವಕರು ಬಾಲಕಿಯ ಮನೆಗೆ ನುಗ್ಗಿ, ಆಕೆಯನ್ನು ಹೊರಗೆಳೆದು, ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಸುಟ್ಟು ಹಾಕಿದ್ದಾರೆ. ಈ ಕುರಿತು ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ನಾಲ್ವರು ಆರೋಪಿಗಳ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.